RCB vs PBKS Live: ಹೌದು.. ಈ ಸಲ ಕಪ್ ನಮ್ದೇ.. RCB Champion

Krishnaveni K
ಮಂಗಳವಾರ, 3 ಜೂನ್ 2025 (23:21 IST)
ಅಹಮ್ಮದಾಬಾದ್: ಆರ್ ಸಿಬಿ ಕಪ್ ಗೆಲ್ಲಲು ಲಾಯಕ್ಕಲ್ಲ ಎಂದವರಿಗೆ, ವಿಶ್ವದ ಯಾವುದೇ ಮೂಲೆಗೆ ಹೋದರೂ ಈ ಸಲ ಕಪ್ ನಮ್ದೇ ಎಂದು ಪ್ರೋತ್ಸಾಹಿಸುತ್ತಿದ್ದ ಅಭಿಮಾನಿಗಳಿಗೆ, ನಾನಿದ್ದಾಗ ಒಮ್ಮೆಯಾದರೂ ಕಪ್ ಗೆಲ್ಲಬೇಕು ಎಂದು ಹಂಬಲಿಸುತ್ತಿದ್ದ ವಿರಾಟ್ ಕೊಹ್ಲಿಗೆ ಈ ಕಪ್ ಅರ್ಪಣೆ. ಹೌದು.. ಈ ಸಲ ಕಪ್ ನಮ್ದೇ..

ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರನ್ ಗಳಿಂದ ಸೋಲಿಸಿದ ಆರ್ ಸಿಬಿ ಈ ಬಾರಿ ಕಪ್ ನಮ್ದೇ ಎಂದು ಗೆದ್ದು ಬೀಗಿದೆ. ಇದರೊಂದಿಗೆ 18 ವರ್ಷಗಳ ಕನಸು ನನಸಾಗಿದೆ.

ಇಂದು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 190 ರನ್ ಗಳಿಸಿದಾಗ ಈ ಮೊತ್ತ ಡಿಫೆಂಡ್ ಮಾಡಲು ಸಾಕಾಗುತ್ತಾ ಎಂದು ಎಲ್ಲರಿಗೂ ಒಂದು ಅನುಮಾನ ಕಾಡಿತ್ತು. ಆದರೆ ಜೋಶ್ ಹೇಝಲ್ ವುಡ್ ಮೇಲೆ ಎಲ್ಲರ ಭರವಸೆಯಿತ್ತು. ಆದರೆ ಇಂದು ಔಟ್ ಆಫ್ ಸಿಲಬಸ್ ಆಗಿ ಬಂದವರು ಕೃನಾಲ್ ಪಾಂಡ್ಯ. 2 ವಿಕೆಟ್ ಕಬಳಿಸುವುದರ ಜೊತೆಗೆ ರನ್ ಕೂಡಾ ನಿಯಂತ್ರಿಸುವ ಮೂಲಕ ಪಂದ್ಯ ಆರ್ ಸಿಬಿ ಕಡೆಗೆ ವಾಲುವಂತೆ ಮಾಡಿದರು.

ನಾಯಕ ಶ್ರೇಯಸ್ ಅಯ್ಯರ್ 1 ರನ್ ಗೆ ವಿಕೆಟ್ ಒಪ್ಪಿಸಿದಾಗ ಪಂದ್ಯಕ್ಕೆ ತಿರುವು ಸಿಕ್ಕಿತು. ಇದಾದ ಬಳಿಕ ಶಶಾಂಕ್ ಸಿಂಗ್ ಕೊಂಚ ಪ್ರತಿರೋಧ ತೋರಿದರೂ ಅವರ ಇನಿಂಗ್ಸ್ 60 ಕ್ಕೇ ಸೀಮಿತವಾಯಿತು. ಪಂಜಾಬ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸುತ್ತಿದ್ದಂತೇ ಆರ್ ಸಿಬಿ ಗೆಲುವು ಕನ್ ಫರ್ಮ್ ಆಯಿತು. ಮೈದಾನದಲ್ಲಿದ್ದ ಆಟಗಾರರು, ಪ್ರೇಕ್ಷಕರ ಜೊತೆಗೆ ಇಡೀ ಕರ್ನಾಟಕವೇ ಈ ಗೆಲುವನ್ನು ಸಂಭ್ರಮಿಸುತ್ತಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಮೃತಿ ಮಂಧಾನ, ಪಾಲಾಶ್ ಮದುವೆ ನಡೆಯುತ್ತಾ: ಬಿಗ್ ಅಪ್ ಡೇಟ್ ಕೊಟ್ಟ ಪಾಲಾಶ್ ತಾಯಿ

ಗೆಳೆತನ ಅಂದ್ರೆ ಹೀಗಿರಬೇಕು: ಸ್ಮೃತಿ ಮಂಧಾನಗಾಗಿ ದೊಡ್ಡ ನಿರ್ಧಾರ ಕೈಗೊಂಡ ಜೆಮಿಮಾ ರೊಡ್ರಿಗಸ್

ಧೋನಿ ಮನೆಯಲ್ಲಿ ಪಾರ್ಟಿ, ಆದ್ರೆ ಎಲ್ಲರಿಗಿಲ್ಲ ಆಹ್ವಾನ: ಕೊಹ್ಲಿಗೆ ಧೋನಿಯಿಂದ ಸ್ಪೆಷಲ್ ಟ್ರೀಟ್ಮೆಂಟ್

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಏಕದಿನ ಯಾವಾಗ, ಎಲ್ಲಿ ಇಲ್ಲಿದೆ ವಿವರ

ಕ್ಯಾಪ್ಟನ್ ಜೊತೆ ಹೊಂದಾಣಿಕೆಯಾಗ್ತಿಲ್ಲ ಎಂದಾಕ್ಷಣ ಕೋಚ್ ಹುದ್ದೆ ಬಿಟ್ಟಿದ್ದ ಅನಿಲ್ ಕುಂಬ್ಳೆ: ಆದ್ರೆ ಗಂಭೀರ್...

ಮುಂದಿನ ಸುದ್ದಿ
Show comments