IPL 2025: 400ನೇ ಪಂದ್ಯದಲ್ಲೂ ಮಹೇಂದ್ರಸಿಂಗ್‌ ಧೋನಿಗೆ ನಿರಾಸೆ: ಪ್ಲೇ ಆಫ್‌ ರೇಸ್‌ನಿಂದಲೇ ಚೆನ್ನೈ ತಂಡ ಔಟ್‌

Sampriya
ಶನಿವಾರ, 26 ಏಪ್ರಿಲ್ 2025 (00:03 IST)
Photo Courtesy X
ಚೆನ್ನೈ: ಕ್ರಿಕೆಟ್‌ ದಿಗ್ಗಜ ಮಹೇಂದ್ರಸಿಂಗ್‌ ಧೋನಿ ಅವರಿಗೆ ಶುಕ್ರವಾರ ನಡೆದ ಐಪಿಎಲ್‌ ಪಂದ್ಯ ಟಿ20 ಕ್ರಿಕೆಟ್‌ನಲ್ಲಿ 400ನೇ ಪಂದ್ಯವಾಗಿತ್ತು. ಈ ಪಂದ್ಯವನ್ನು ಗೆದ್ದು ಅವಿಸ್ಮರಣೀಯಗೊಳಿಸುವ ತವಕದಲ್ಲಿದ್ದರು. ಆದರೆ, ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಐದು ವಿಕೆಟ್‌ಗಳ ಸೋಲು ಅನುಭವಿಸಿ ಪ್ಲೇ ಆಫ್‌ ರೇಸ್‌ನಿಂದಲೇ ಹೊರಬಿತ್ತು.

ಮತ್ತೊಂದೆಡೆ ಸನ್‌ರೈಸರ್ಸ್‌ ತಂಡವು ಚೆನ್ನೈನಲ್ಲಿ ಇದೇ ಮೊದಲ ಬಾರಿ ಜಯ ದಾಖಲಿಸಿಕೊಂಡು, ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿತು. ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಏರಿತು.;

ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀಡಿದ್ದ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ 18.4 ಓವರ್‌ಗಳಲ್ಲಿ 155 ರನ್‌ ಗಳಿಸಿದೆ. ಈ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಮತ್ತೊಮ್ಮೆ ಪಂದ್ಯವನ್ನು ಕೈಚೆಲ್ಲಿದೆ. ಇಶಾನ್‌ ಕಿಶನ್‌ ಮತ್ತು ಕಮಿಂಚು ಮೆಂಡಿಸ್‌ ಬ್ಯಾಟಿಂಗ್‌ನಲ್ಲಿ ಮಿಂಚಿದರು.

ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ನಿಗದಿತ 19.5 ಓವರ್‌ಗಳಲ್ಲಿ 154 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭದಲ್ಲೇ ಶೇಕ್ ರಶೀದ್ (0) ಹಾಗೂ ಸ್ಯಾಮ್ ಕರನ್ (9) ನಿರಾಸೆ ಮೂಡಿಸಿದರು. ಈ ನಡುವೆ ಆಯುಷ್ ಮ್ಹಾತ್ರೆ (30) ಹಾಗೂ ರವೀಂದ್ರ ಜಡೇಜ (21) ಅಲ್ಪ ಪ್ರತಿರೋಧ ಒಡ್ಡಿದರು.

ಈ ಪಂದ್ಯದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಡೇವಾಲ್ಡ್ ಬ್ರೆವಿಸ್ ಕೊನೆಯ ಹಂತದಲ್ಲಿ ಬಿರುಸಿನ 42 ರನ್ ಗಳಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. 25 ಎಸೆತಗಳನ್ನು ಎದುರಿಸಿದ ಬ್ರೆವಿಸ್ ನಾಲ್ಕು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 42 ರನ್ ಗಳಿಸಿದರು. ದೀಪಕ್ ಹೂಡಾ ಸಹ 22 ರನ್‌ಗಳ ಕಾಣಿಕೆ ನೀಡಿದರು.

ಶಿವಂ ದುಬೆ (12) ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಎಸ್‌ಆರ್‌ಎಚ್ ಪರ ಹರ್ಷಲ್ ಪಟೇಲ್ ನಾಲ್ಕು ಮತ್ತು ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಜಯದೇವ್ ಉನಾದ್ಕಟ್ ತಲಾ ಎರಡು ವಿಕೆಟ್ ಗಳಿಸಿದರು.

<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಮೃತಿ ಮಂಧಾನ, ಪಾಲಾಶ್ ಮದುವೆ ನಡೆಯುತ್ತಾ: ಬಿಗ್ ಅಪ್ ಡೇಟ್ ಕೊಟ್ಟ ಪಾಲಾಶ್ ತಾಯಿ

ಗೆಳೆತನ ಅಂದ್ರೆ ಹೀಗಿರಬೇಕು: ಸ್ಮೃತಿ ಮಂಧಾನಗಾಗಿ ದೊಡ್ಡ ನಿರ್ಧಾರ ಕೈಗೊಂಡ ಜೆಮಿಮಾ ರೊಡ್ರಿಗಸ್

ಧೋನಿ ಮನೆಯಲ್ಲಿ ಪಾರ್ಟಿ, ಆದ್ರೆ ಎಲ್ಲರಿಗಿಲ್ಲ ಆಹ್ವಾನ: ಕೊಹ್ಲಿಗೆ ಧೋನಿಯಿಂದ ಸ್ಪೆಷಲ್ ಟ್ರೀಟ್ಮೆಂಟ್

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಏಕದಿನ ಯಾವಾಗ, ಎಲ್ಲಿ ಇಲ್ಲಿದೆ ವಿವರ

ಕ್ಯಾಪ್ಟನ್ ಜೊತೆ ಹೊಂದಾಣಿಕೆಯಾಗ್ತಿಲ್ಲ ಎಂದಾಕ್ಷಣ ಕೋಚ್ ಹುದ್ದೆ ಬಿಟ್ಟಿದ್ದ ಅನಿಲ್ ಕುಂಬ್ಳೆ: ಆದ್ರೆ ಗಂಭೀರ್...

ಮುಂದಿನ ಸುದ್ದಿ
Show comments