Publish Date: Sun, 26 Jul 2020 (09:58 IST)
Updated Date: Sun, 26 Jul 2020 (10:00 IST)
ದುಬೈ: ಕೊರೋನಾದಿಂದಾಗಿ ಎಲ್ಲಾ ರಾಷ್ಟ್ರಗಳೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಆದರೆ ಐಪಿಎಲ್ ಆಯೋಜಿಸಲು ಹೊರಟಿರುವ ಯುಎಇ ರಾಷ್ಟ್ರ ಈಗ ಭರ್ಜರಿ ಆದಾಯ ಗಳಿಸಲಿದೆ.
ಐಪಿಎಲ್ 13 ರಿಂದ ಯುಎಇ ಆದಾಯ ಹೆಚ್ಚಲಿದೆ ಎಂದು ಶ್ರೀಲಂಕಾ ಕ್ರಿಕೆಟಿಗ ಕುಮಾರ ಸಂಗಕ್ಕಾರ ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಶ್ರೀಲಂಕಾವೂ ಐಪಿಎಲ್ ಆಯೋಜಿಸಲು ಮುಂದೆ ಬಂದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಒಂದು ದೇಶದ ಆರ್ಥಿಕತೆ ಮೇಲೆ ಕ್ರೀಡೆಯ ಕೊಡುಗೆಯೂ ಅಪಾರ. ಹೀಗಾಗಿ ಐಪಿಎಲ್ 13 ರನ್ನು ಆಯೋಜಿಸುವ ಮೂಲಕ ಯುಎಇಗೆ ಬಹಳಷ್ಟು ಲಾಭವಾಗಲಿದೆ ಎಂದು ಅವರು ಹೇಳಿದ್ದಾರೆ. ಇದೇ ಕಾರಣಕ್ಕಾಗಿಯೇ ಎಲ್ಲಾ ರಾಷ್ಟ್ರಗಳು ಶ್ರೀಮಂತ ಕ್ರೀಡಾಕೂಟವೆಂಬ ಹೆಗ್ಗಳಿಕೆಯ ಐಪಿಎಲ್ ಆಯೋಜಿಸಲು ಆಸಕ್ತಿ ವಹಿಸುತ್ತದೆ.