Webdunia - Bharat's app for daily news and videos

Install App

ಐಪಿಎಲ್‌ನಲ್ಲಿ ಅತ್ಯಧಿಕ ಕ್ಯಾಚ್: ರೈನಾ ದಾಖಲೆಯನ್ನು ಮುರಿದ ಕಿಂಗ್‌ ಕೊಹ್ಲಿ

Sampriya
ಭಾನುವಾರ, 7 ಏಪ್ರಿಲ್ 2024 (12:09 IST)
Photo Courtesy X
ಜೈಪುರ: ಕ್ರಿಕೆಟ್‌ ಲೋಕದ 'ರನ್‌ ಯಂತ್ರ' ಖ್ಯಾತಿಯ ಕಿಂಗ್‌ ವಿರಾಟ್‌ ಕೊಹ್ಲಿ ಅವರು ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಇದೀಗ ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ ಪಡೆದ ಫೀಲ್ಡರ್‌ ಎನಿಸಿಕೊಂಡಿದ್ದಾರೆ.

ಆರ್‌ಸಿಬಿ ತಂಡದ ಪ್ರಮುಖ ಆಟಗಾರ ಕೊಹ್ಲಿ ಅವರು ಶನಿವಾರ ಜೈಪುರದಲ್ಲಿ ನಡೆದ ರಾಜಸ್ಥಾನ ರಾಯಲ್ಸ್‌ ತಂಡದ ವಿರುದ್ಧ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ, ರಿಯಾನ್‌ ಪರಾಗ್‌ ಕ್ಯಾಚ್‌ ಪಡೆಯುವ ಮೂಲಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಐಪಿಎಲ್‌ನಲ್ಲಿ ತಮ್ಮ ಅಮೋಘ ಕ್ಷೇತ್ರರಕ್ಷಣೆ ಮೂಲಕ ಇದುವರೆಗೆ ಒಟ್ಟು 110 ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದ್ದಾರೆ. ಐಪಿಎಲ್‌ ಆರಂಭದಿಂದಲೂ ಆರ್‌ಸಿಬಿ ತಂಡದ ಪರ ಆಡುತ್ತಿರುವ ಕೊಹ್ಲಿ ಈವರೆಗೆ 242 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.

ಐಪಿಎಲ್‌ನಲ್ಲಿ ಅತಿಹೆಚ್ಚು ಕ್ಯಾಚ್‌ ಪಡೆದ ದಾಖಲೆ 'ಮಿಸ್ಟರ್‌ ಐಪಿಎಲ್‌' ಖ್ಯಾತಿಯ ಸುರೇಶ್‌ ರೈನಾ ಅವರ ಹೆಸರಿನಲ್ಲಿ ಈವರೆಗೆ ಇತ್ತು. ಅವರು ಒಟ್ಟು 109 ಕ್ಯಾಚ್‌ ಪಡೆದಿದ್ದಾರೆ.

ರಾಜಸ್ಥಾನ ರಾಯಲ್ಸ್‌ ವಿರುದ್ಧ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಅವರ ದಾಖಲೆಯ 8ನೇ ಶತಕದ ನೆರವಿನಿಂದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 183 ರನ್ ಗಳಿಸಿತು.  

ಈ ಗುರಿ ಬೆನ್ನತ್ತಿದ ರಾಯಲ್ಸ್‌ ಇನ್ನೂ 5 ಎಸೆತ ಬಾಕಿ ಇರುವಂತೆಯೇ 189 ರನ್ ಗಳಿಸಿ, ಜಯದ ನಗೆ ಬೀರಿತು. ಗೆಲ್ಲಲು ಒಂದು ರನ್‌ ಬೇಕಿದ್ದಾಗ ಆರಂಭಿಕ ಬ್ಯಾಟರ್‌ ಜೋಸ್‌ ಬಟ್ಲರ್ ಸಿಕ್ಸರ್‌ ಸಿಡಿಸಿ ಶತಕ ಪೂರೈಸಿಕೊಂಡರು. ಅವರು ಐಪಿಎಲ್‌ನಲ್ಲಿ 6ನೇ ಶತಕ ಇದಾಗಿದೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SL: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಮತ್ತೊಂದು ಆಕ್ರಮಣಕಾರೀ ನಿರ್ಧಾರ

INDvsSL: ಕಾದು ಕಾದು ಸಾಕಾಯ್ತು.. ಕೊನೆಗೂ ಧ್ರುವ ಜ್ಯುರೆಲ್ ಶತಕ ಸಿಡಿಸಿದಾಗ ಗಿಲ್, ಗಂಭೀರ್ ರಿಯಾಕ್ಷನ್ ಹೇಗಿತ್ತು ಗೊತ್ತಾ Video

ನನಗೆ ಆತ ಏನು ಹೇಳಿದ್ದ ಎಂದು ಗೊತ್ತಿಲ್ಲದೇ ಜಡ್ಜ್ ಮಾಡಬೇಡಿ: ಕಿತ್ತಾಡಿದ್ದಕ್ಕೆ ಯಶಸ್ವಿ ಜೈಸ್ವಾಲ್ ಖಡಕ್ ಹೇಳಿಕೆ

IND vs SL: ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಹೊಸ ದಾಖಲೆ

Ind vs SL 2nd TEST: ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿದ ಭಾರತಕ್ಕೆ ಆರಂಭಿಕ ಆಘಾತ

ಮುಂದಿನ ಸುದ್ದಿ
Show comments