Select Your Language

Notifications

webdunia
webdunia
webdunia
webdunia

ಹಾರ್ದಿಕ್ ಪಾಂಡ್ಯಗೆ ಬೌಲಿಂಗ್ ಮಾಡಲು ಸದ್ಯಕ್ಕೆ ಅಸಾಧ್ಯ!

webdunia
ದುಬೈ , ಶುಕ್ರವಾರ, 1 ಅಕ್ಟೋಬರ್ 2021 (17:21 IST)
ದುಬೈ: ಮುಂಬೈ ಇಂಡಿಯನ್ಸ್ ಆಟಗಾರ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದೇ ತುಂಬಾ ಸಮಯವೇ ಕಳೆದುಹೋಗಿದೆ.

 
ಹಿಂದೊಮ್ಮೆ ಬೆನ್ನು ನೋವಿಗೊಳಗಾಗಿದ್ದ ಹಾರ್ದಿಕ್ ಕೇವಲ ಬ್ಯಾಟರ್ ಆಗಿ ಆಡುತ್ತಿದ್ದಾರೆ. ಟೀಂ ಇಂಡಿಯಾದಲ್ಲೂ ಅವರು ಬೌಲಿಂಗ್ ಮಾಡಿದ್ದು ಅಪರೂಪ.

ಹೀಗಿರುವಾಗ ಮುಂಬೈ ಇಂಡಿಯನ್ಸ್ ತಾರೆಯನ್ನು ವಿಶ್ವಕಪ್ ಗೆ ಆಯ್ಕೆ ಮಾಡಿರುವುದರ ಬಗ್ಗೆ ಟೀಕೆಗಳೂ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಕೋಚ್ ಮಹೇಲ ಜಯವರ್ಧನ್ ಹಾರ್ದಿಕ್ ಗೆ ಸದ್ಯಕ್ಕೆ ಬೌಲಿಂಗ್ ಮಾಡಲು ಕಷ್ಟವಾಗಬಹುದು ಎಂದಿದ್ದಾರೆ.

‘ಹಾರ್ದಿಕ್ ಆರೋಗ್ಯದ ಬಗ್ಗೆ ನಾವು ಭಾರತೀಯ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವರು ಇತ್ತೀಚೆಗಿನ ದಿನಗಳಲ್ಲಿ ಬೌಲಿಂಗ್ ಮಾಡಿಲ್ಲ. ಒಂದು ವೇಳೆ ಅವರನ್ನು ಬಲವಂತ ಮಾಡಿದರೆ ಕಷ್ಟಕ್ಕೆ ದೂಡಿದಂತಾಗುತ್ತದೆ. ಪ್ರತಿನಿತ್ಯ ಅವರ ಆರೋಗ್ಯದ ಸ್ಥಿತಿಗತಿಯನ್ನು ನಾವು ಪರಿಶೀಲಿಸುತ್ತಿರುತ್ತೇವೆ’ ಎಂದು ಮಹೇಲ ಜಯವರ್ಧನೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ಮಹಿಳಾ ಟೆಸ್ಟ್: ಭಾರತೀಯರ ಅದ್ಭುತ ಬ್ಯಾಟಿಂಗ್