Publish Date: Thu, 07 Dec 2017 (08:56 IST)
Updated Date: Thu, 07 Dec 2017 (08:58 IST)
ಚೆನ್ನೈ: ಈ ಬಾರಿಯ ಐಪಿಎಲ್ ಗೆ ನಿಷೇಧ ಶಿಕ್ಷೆ ಮುಗಿಸಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಮರಳಲಿದೆ. ಇದರ ಜತೆಗೇ ಚೆನ್ನೈ ತಂಡಕ್ಕೆ ಧೋನಿ ಮರಳುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಧೋನಿ ಈ ಮೊದಲು ಎರಡು ವರ್ಷ ಪುಣೆ ವಾರಿಯರ್ಸ್ ಪರ ಆಡುತ್ತಿದ್ದರು. ಇದೀಗ ಮತ್ತೆ ತಮ್ಮ ಚೆನ್ನೈ ತಂಡದ ನಾಯಕತ್ವ ವಹಿಸಲು ಧೋನಿ ಸಿದ್ಧರಾಗಿದ್ದಾರೆ.
ಐಪಿಎಲ್ ಆಡಳಿತ ಮಂಡಳಿ ಚೆನ್ನೈ ಮತ್ತು ರಾಜಸ್ಥಾನ್ ತಂಡಕ್ಕೆ ಮೂವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದ್ದು, ಚೆನ್ನೈ ಅಭಿಮಾನಿಗಳು ಪ್ರೀತಿಯಿಂದ ತಲೈವಾ ಎಂದು ಕರೆಸಿಕೊಳ್ಳುವ ಧೋನಿ ಪುನರಾಗಮನದ ಪುಳಕ ಮೂಡಿಸಿದೆ. ಧೋನಿ ಜತೆಗೆ ರೈನಾ ಮತ್ತು ಅಶ್ವಿನ್ ಮರಳುವ ನಿರೀಕ್ಷೆಯದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ