ಕೋಲ್ಕತ್ತಾಕ್ಕೆ ಮಣಿದ ಕ್ಯಾಪಿಟಲ್ಸ್‌: ಅಗ್ರಸ್ಥಾನಕ್ಕೆ ಜಿಗಿದ ನೈಟ್‌ ರೈಡರ್ಸ್‌

Sampriya
ಗುರುವಾರ, 4 ಏಪ್ರಿಲ್ 2024 (10:04 IST)
Photo Courtesy X
ವಿಶಾಖಪಟ್ಟಣ: ಐ‍ಪಿಎಲ್‌ ಟೂರ್ನಿಯಲ್ಲಿಯೇ ಎರಡನೇ ದೊಡ್ಡ ಮೊತ್ತವನ್ನು ದಾಖಲಿಸಿದ ಕೋಲ್ಕತ್ತಾ ನೈಟ್‌ ರೈಸರ್ಸ್‌ ತಂಡವು  106 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸುಲಭ ಜಯ ಸಾಧಿಸಿತು.

ಟಾಸ್‌ ಗೆದ್ದು ಮೊದಲು ಬಿರುಸಿನ ಬ್ಯಾಟಿಂಗ್‌ ನೆರವಿನಿಂದ ನೈಟ್‌ ರೈಡರ್ಸ್‌ ಬಳಗ 7 ವಿಕೆಟ್‌ಗೆ 272 ರನ್‌ಗಳ ಭಾರಿ ಮೊತ್ತ ಕಲೆಹಾಕಿತು. ವೆಸ್ಟ್‌ ಇಂಡೀಸ್‌ ಆಟಗಾರ ನರೈನ್‌ ನಾರಾಯಣ್‌ ಮತ್ತು ‌ರಘುವಂಶಿ ಅರ್ಧಗಳಿಸಿದರು. ಕೋಲ್ಕತ್ತ ಬ್ಯಾಟರ್‌ಗಳು ಒಟ್ಟು 18 ಸಿಕ್ಸರ್‌ಗಳು ಮತ್ತು 22 ಬೌಂಡರಿಗಳನ್ನು ಬಾರಿಸಿ, ಡೆಲ್ಲಿ ಬೌಲರ್‌ಗಳನ್ನು ಕಾಡಿದರು.

ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಕೋಲ್ಕತ್ತಾ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. 33 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.  ತಂಡವು 17.2 ಓವರ್‌ಗಳಲ್ಲಿ 166 ರನ್‌ಗೆ ಆಲೌಟ್‌ ಆಯಿತು.

ಹ್ರಾಟ್ರಿಕ್‌ ಗೆಲುವಿನೊಂದಿಗೆ ಕೋಲ್ಕತ್ತಾ ತಂಡವು ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಿಂದ ಅಗ್ರಸ್ಥಾನಕ್ಕೆ ಏರಿತು. ರಿಷಭ್‌ ಪಂತ್‌ ಸಾರಥ್ಯದ ಡೆಲ್ಲಿ ತಂಡವು 9ನೇ ಸ್ಥಾನಕ್ಕೆ ಜಾರಿತು.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಸಿಸಿ ವಿಶ್ವಕಪ್‌ ತಂಡಕ್ಕೆ ಲಾರಾ ವೋಲ್ವಾರ್ಟ್‌ ಸಾರಥ್ಯ: ಕಪ್‌ ಗೆದ್ದರೂ ಹರ್ಮನ್‌ಗೆ ಸಿಗದ ಚಾನ್ಸ್‌

ಮುಟ್ಟಾದಾಗ ಮಹಿಳಾ ಕ್ರಿಕೆಟಿಗರು ಏನು ಮಾಡ್ತಾರೆ: ಶಾಕಿಂಗ್ ವಿಚಾರ ಹೇಳಿದ ಜೆಮಿಮಾ ರೊಡ್ರಿಗಸ್

ಪುರುಷರಿಗೊಂದು ಮಹಿಳೆಯರಿಗೊಂದು ನ್ಯಾಯನಾ.. ಬಿಸಿಸಿಐ ಮಾಡಿದ್ದು ಸರಿಯಿಲ್ಲ ಫ್ಯಾನ್ಸ್ ಆಕ್ರೋಶ

ಟ್ರೋಫಿ ಸ್ವೀಕರಿಸಲು ಬಂದ ಹರ್ಮನ್ ಪ್ರೀತ್ ಈ ನಡೆಯನ್ನು ಗೌರವಯುತವಾಗಿ ಬೇಡವೆಂದ ಜಯ್‌ ಶಾ

ಸೂರ್ಯಕುಮಾರ್‌ ಹೆಗಲಿಗೆ ಟಿ20 ನಾಯಕತ್ವ ಜವಾಬ್ದಾರಿ, ಕಾಪು ಮಾರಿಗುಡಿಗೆ ಪತ್ನಿ ಭೇಟಿ

ಮುಂದಿನ ಸುದ್ದಿ
Show comments