Webdunia - Bharat's app for daily news and videos

Install App

ವಿರಾಟ್ ಕೊಹ್ಲಿ ಕಿಟ್ ಬ್ಯಾಗ್ ನಲ್ಲಿ ಏನೇನಿರುತ್ತೆ? ಅವರೇ ಹೇಳ್ತಾರೆ ನೋಡಿ

Webdunia
ಬುಧವಾರ, 14 ಅಕ್ಟೋಬರ್ 2020 (11:32 IST)
ದುಬೈ: ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮ ಕಿಟ್ ಬ್ಯಾಗ್ ಒಳಗೆ ಏನೇನು ಇಟ್ಟುಕೊಂಡಿರುತ್ತಾರೆ? ಇದನ್ನು ಸ್ವತಃ ಅವರೇ ತೋರಿಸಿಕೊಟ್ಟಿದ್ದಾರೆ.


ಕಿಂಗ್ ಕೊಹ್ಲಿಗೆ ತಮ್ಮ ಕಿಟ್ ಬ್ಯಾಗ್ ಎಂದರೆ ಯಾವತ್ತೂ ವಿಶೇಷವಂತೆ. ಚಿಕ್ಕಂದಿನಿಂದಲೂ ಹೊಸ ಪ್ಯಾಡ್, ಬ್ಯಾಟ್‍ ತುಂಬುವ ಕಿಟ್ ಬ್ಯಾಗ್ ಗಳೆಂದರೆ ಕೊಹ್ಲಿಗೆ ಒಂಥರಾ ಖುಷಿಯಂತೆ. ತನ್ನ ಬ್ಯಾಗ್ ನಲ್ಲಿ ಆರ್ ಸಿಬಿಯ ಒಂದು ಜತೆ ಎಕ್ಸ್ ಟ್ರಾ ಕ್ಯಾಪ್, ತೊಡೆಯ ರಕ್ಷಾ ಕವಚ, ಐಪಿಎಲ್ ಗಾಗಿಯೇ ಹೊಸ ಜತೆ ಪ್ಯಾಡ್ ಇಟ್ಟುಕೊಂಡಿರುತ್ತಾರಂತೆ. ದುಬೈಯಲ್ಲಿ ಅತೀ ಉಷ್ಣದ ವಾತಾವರಣವಿರುವುದರಿಂದ 10 ರಿಂದ 11 ಜತೆ ಗ್ಲೌಸ್ ಇಟ್ಟುಕೊಂಡಿರುತ್ತಾರೆ. ಸೈಡ್ ಪಾಕೆಟ್ ಗಳಲ್ಲಿ ಗ್ರಿಪ್ ಕವರ್, ಬ್ಯಾಟ್ ಸ್ಟಿಕ್ಕರ್ ಗಳಿಟ್ಟುಕೊಂಡಿರುತ್ತಾರಂತೆ. ಹಿಂದಿನ ಜಿಪ್ ನಲ್ಲಿ ಮೂರು ಬ್ಯಾಟ್ ಇಟ್ಟುಕೊಳ್ಳುತ್ತಾರಂತೆ. ಇದಲ್ಲದೆ ಬ್ಯಾಟ್ ಗಾಗಿಯೇ ಇನ್ನೊಂದು ಕಿಟ್ ಬ್ಯಾಗ್ ಇರುತ್ತದೆ. ನನ್ನ ಎರಡು ತಿಂಗಳ ವಾಸಕ್ಕೆ ಇಷ್ಟು ಸಾಕು ಎಂದು ಕೊಹ್ಲಿ ವಿವರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್, ರೋಹಿತ್ ಅನುಪಸ್ಥಿತಿ ನಿಭಾಯಿಸುವುದು ದೊಡ್ಡ ಸವಾಲು ಎಂದ ಗಂಭೀರ್‌

India New Test Captain: ಹರಿದಾಡುತ್ತಿರುವ ಹೆಸರುಗಳಲ್ಲಿ ಇವರೇ ನಾಯಕನಾಗುವುದು ಪಕ್ಕಾ ಅಂತೇ

RCB vs SRH match: ಆರ್ ಸಿಬಿಗೆ ಇಂದು ಮರಳಿ ನಂ1 ಪಟ್ಟಕ್ಕೇರುವುದೇ ಗುರಿ

KL Rahul: ಕೆಎಲ್ ರಾಹುಲ್ ವೃತ್ತ ಎಳೆದ ಮೇಲೆಯೇ ಡೆಲ್ಲಿ ಕ್ಯಾಪಿಟಲ್ಸ್ ಗೆ ಈ ಗತಿಯಾಗಿದ್ದು

ಮುಂದಿನ ಸುದ್ದಿ
Show comments