Publish Date: Wed, 14 Oct 2020 (10:25 IST)
Updated Date: Wed, 14 Oct 2020 (10:29 IST)
ದುಬೈ: ಐಪಿಎಲ್ 13 ರಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯಲಿದ್ದು, ಕಳೆದ ಪಂದ್ಯ ಸೋತು ಅಗ್ರ ಪಟ್ಟ ಕಳೆದುಕೊಂಡಿರುವ ಡೆಲ್ಲಿಗೆ ಅಂಕ ಸುಧಾರಿಸಲು ಅವಕಾಶ ಸಿಗಲಿದೆ.
ಡೆಲ್ಲಿಗೆ ಹೋಲಿಸಿದರೆ ರಾಜಸ್ಥಾನ್ ಪ್ರಬಲ ತಂಡವಲ್ಲ. ಆದರೆ ಸತತ ಸೋಲಿನಿಂದ ಕಂಗೆಟ್ಟಿರುವ ರಾಜಸ್ಥಾನ್ ಗೆಲುವಿಗಾಗಿ ಕಾದು ಕುಳಿತಿದ್ದು, ಗೆಲುವು ದಾಖಲಿಸಿದರೂ ಅಚ್ಚರಿಯಿಲ್ಲ. ಡೆಲ್ಲಿಗೆ ರಿಷಬ್ ಪಂತ್ ಅನುಪಸ್ಥಿತಿಯೂ ಕೊರತೆಯಾಗಿ ಕಾಡಲಿದೆ. ಇತ್ತ ರಾಜಸ್ಥಾನ್ ಪ್ರಮುಖ ಆಲ್ ರೌಂಡರ್ ಬೆನ್ ಸ್ಟೋಕ್ ಆಗಮನದ ನಿರೀಕ್ಷೆಯಲ್ಲಿದ್ದು, ಅವರು ಇಂದಿನ ಪಂದ್ಯದಲ್ಲಿ ಆಡಿದರೆ ಹೆಚ್ಚಿನ ಬಲ ಸಿಕ್ಕಂತಾಗುತ್ತದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.