ಐಪಿಎಲ್ 13: ಸೋಲು ಸರಪಳಿ ಕಳಚಿಕೊಂಡ ಚೆನ್ನೈ, ಅಗ್ರಸ್ಥಾನಕ್ಕೇರಿದ ಮುಂಬೈ

Webdunia
ಸೋಮವಾರ, 5 ಅಕ್ಟೋಬರ್ 2020 (09:06 IST)
ದುಬೈ: ಐಪಿಎಲ್ 13 ರಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಗೆಲುವು ಕಂಡಿದ್ದರೆ, ಅತ್ತ ಮುಂಬೈ ಇಂಡಿಯನ್ಸ್ ಹೈದರಾಬಾದ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ತಾನಕ್ಕೇರಿದೆ.


ಎರಡು ಪಂದ್ಯಗಳ ಪೈಕಿ ಮೊದಲ ಪಂದ್ಯದಲ್ಲಿ ಮುಂಬೈ-ಹೈದರಾಬಾದ್ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಇ 5 ವಿಕೆಟ್ ನಷ್ಟಕ್ಕೆ ಭರ್ತಿ 208 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಹೈದರಾಬಾದ್ ಹೋರಾಟ ನಡೆಸಿತಾದರೂ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದಾಗಿ 34 ರನ್ ಗಳ ಸೋಲುಂಡಿತು.

ಇನ್ನೊಂದು ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಭರ್ಜರಿ 10 ವಿಕೆಟ್ ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕೆಎಲ್ ರಾಹುಲ್ ಅರ್ಧಶತಕ (63) ಮಯಾಂಕ್ ಅಗರ್ವಾಲ್ 26, ಮನ್ ದೀಪ್ 27 ಹಾಗೂ ನಿಕಲಸ್ ಪೂರನ್ 33 ರನ್ ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಈ ಮೊತ್ತವನ್ನು ಸುಲಭವಾಗಿ ಬೆನ್ನತ್ತಿದ ಚೆನ್ನೈ ಫಾ ಡು ಪ್ಲೆಸಿಸ್ 87, ಶೇನ್ ವ್ಯಾಟ್ಸನ್ 83 ರನ್ ಗಳ ನೆರವಿನಿಂದ 17.4 ಓವರ್ ಗಳಲ್ಲಿಯೇ ವಿಕೆಟ್ ನಷ್ಟವಿಲ್ಲದೇ 181 ರನ್ ಗಳಿಸುವ ಮೂಲಕ ಸುಲಭ ಜಯ ದಕ್ಕಿಸಿಕೊಂಡಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ಈ ಬಾರಿ ಕಪ್ ಯಾರ ಪಾಲಾಗಬಹುದು

ಆಕಾಶ್ ಅಂಬಾನಿ ಮುಖಕ್ಕೇ ಮೊಬೈಲ್ ಬಿಸಾಕಿದ ಪಂಜಾಬ್ ಅಭಿಮಾನಿ: ಮುಂಬೈ ಮಾಲಿಕನ ರಿಯಾಕ್ಷನ್ ನೋಡಿ Video

ಎದುರಾಳಿ ಆಟಗಾರನಾಗಿದ್ದರೂ ಕನ್ನಡಿಗ ಮನೀಶ್ ಪಾಂಡೆಗೆ ವಿರಾಟ್ ಕೊಹ್ಲಿ ಶಹಬ್ಬಾಷ್ Video

IPL 2026: ವಿರಾಟ್ ಕೊಹ್ಲಿ ಕಾಲಿಗೆ ಬೀಳಲು ಮೈದಾನಕ್ಕೇ ನುಗ್ಗಿದ ಅಭಿಮಾನಿ: ಕೊಹ್ಲಿ ಮಾಡಿದ್ದೇನು video

ಮೊದಲ ರನ್ ಗಳಿಸಿದ್ದಕ್ಕೆ ವಿರಾಟ್ ಕೊಹ್ಲಿ ಈ ಪರಿ ಸಂಭ್ರಮಿಸಿದ್ದೇಕೆ Video

ಮುಂದಿನ ಸುದ್ದಿ
Show comments