ಐಪಿಎಲ್ 13: ವಿವಾದಕ್ಕೆ ಕಾರಣವಾಯ್ತು ಧೋನಿ ಹೇಳಿಕೆ

Webdunia
ಮಂಗಳವಾರ, 20 ಅಕ್ಟೋಬರ್ 2020 (09:11 IST)
ದುಬೈ: ಐಪಿಎಲ್ ನಲ್ಲಿ ಸದಾ ಚಾಂಪಿಯನ್ ಆಗಿ ಮೆರೆಯುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಪ್ಲೇ ಆಫ್ ನಿಂದ ಹೊರಬೀಳುತ್ತಿರುವ ಮೊದಲ ತಂಡ ಎನ್ನುವ ಕುಖ್ಯಾತಿಗೆ ಒಳಗಾಗುವ ಸಾಧ್ಯತೆಯಿದೆ.
 


ತಂಡದ ಈ ದುಸ್ಥಿತಿ ಬಗ್ಗೆ ನೆಟ್ಟಿಗರು, ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಧೋನಿಯ ತಪ್ಪು ನಿರ್ಧಾರಗಳ ಬಗ್ಗೆ ಹೇಳುತ್ತಿದ್ದರೆ, ಮತ್ತೆ ಕೆಲವರು ಗೆಲ್ಲಲಿ, ಸೋಲಲಿ ನಮ್ಮ ಬೆಂಬಲ ತಂಡದ ಜತೆಗಿರುತ್ತದೆ ಎಂದಿದ್ದಾರೆ. ಧೋನಿ ಕೇಧಾರ್ ಜಾಧವ್ ಗೆ ಅವಕಾಶ ನೀಡಿದ್ದು, ಸ್ವತಃ ತಾವು ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶಿಸದೇ ಇರುವುದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.

ಅದೂ ಸಾಲದೆಂಬಂತೆ ರಾಜಸ್ಥಾನ್ ವಿರುದ್ಧದ ಪಂದ್ಯದ ಬಳಿಕ ಧೋನಿ ‘ಯುವ ಆಟಗಾರರಿಗೆ ಬೆಂಬಲಿಸಲು ಅವರಲ್ಲಿ ಅಂತಹ ಕಿಡಿ ಕಾಣಲೇ ಇಲ್ಲ’ ಎಂದು ಉಡಾಫೆ ಹೇಳಿಕೆ ನೀಡಿದ್ದು, ಅಭಿಮಾನಿಗಳು, ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹಲವಾರು ಯುವ ಆಟಗಾರರಿಗೆ ಅವಕಾಶ, ಪ್ರೋತ್ಸಾಹ ನೀಡಿದ್ದ ಧೋನಿಯಿಂದ ಇಂತಹ ಹೇಳಿಕೆ ಸರಿಯಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನ ಮುಟ್ಟಿದ್ದಲ್ಲವೂ ಚಿನ್ನ ಎಂಬಂತಿದ್ದ ಧೋನಿಗೆ ಯಾಕೋ ಈ ಬಾರಿ ಟೂರ್ನಿ ಆರಂಭದಿಂದಲೂ ಕೆಟ್ಟ ಗಳಿಗೆ ಮುಂದುವರಿದುಕೊಂಡು ಬಂದಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಚಿನ್ ತೆಂಡೂಲ್ಕರ್‌ ಪುತ್ರಿ ಸಾರಾ ತೆಂಡೂಲ್ಕರ್ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ

ರೋಹಿತ್ ಶರ್ಮಾ ದಾಖಲೆ ಮುರಿದ ಸರ್ಫರಾಜ್ ಖಾನ್: ಬಿಸಿಸಿಐಗೆ ಹೊಸ ಸಂಕಷ್ಟ ತಂದೊಡ್ಡಿದ ಮುಂಬೈ ಬ್ಯಾಟರ್‌

ಮೊಹಮ್ಮದ್ ಶಮಿ ವಿಚಾರದಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಮುಂದಾದ ಬಿಸಿಸಿಐ

INDW vs SLW: ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ದಾಖಲೆ ಮಾಡಿದ ದೀಪ್ತಿ ಶರ್ಮಾ: ಸರಣಿ ಕ್ಲೀನ್ ಸ್ವೀಪ್

ಮತ್ತೇ ಈ ವಿಚಾರವಾಗಿ ಸುದ್ದಿಗೆ ಕಾರಣವಾದ ಎಂಎಸ್ ಧೋನಿ ಪತ್ನಿ ಸಾಕ್ಷಿ

ಮುಂದಿನ ಸುದ್ದಿ
Show comments