ಐಪಿಎಲ್: ಸೋಲಿಗೆ ಕಾರಣ ವಿವರಿಸಿದ ವಿರಾಟ್ ಕೊಹ್ಲಿ

Webdunia
ಬುಧವಾರ, 3 ಏಪ್ರಿಲ್ 2019 (10:05 IST)
ಜೈಪುರ: ರಾಜಸ್ಥಾನ ವಿರುದ್ಧವೂ ಸೋಲುವುದರೊಂದಿಗೆ ಈ ಬಾರಿಯ ಐಪಿಎಲ್ ಕೂಟದಲ್ಲಿ ಸತತ ನಾಲ್ಕನೇ ಸೋಲು ಕಾಣುವುದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಗೆಪಾಟಲಿಗೀಡಾಗಿದೆ.


ಈ ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿರುವ ನಾಯಕ ವಿರಾಟ್ ಕೊಹ್ಲಿಗೆ ಸೋಲಿನ ಕಾರಣ ವಿವರಿಸಿದ್ದಾರೆ. 10-15 ರನ್ ಗಳ ಕೊರತೆಯಾಗಿದ್ದಕ್ಕೇ ಸೋಲು ಕಾಣುವಂತಾಯಿತು ಎಂದು ಕೊಹ್ಲಿ ಹೇಳಿದ್ದಾರೆ.

‘ನಾವು ಸ್ಪರ್ಧಾತ್ಮಕವಾಗಿಯೇ ಆಡಿದ್ದೆವು. ಆದರೂ 10-15 ರನ್ ಗಳ ಕೊರತೆಯಾಯಿತು. 160 ರನ್ ಸ್ಪರ್ಧಾತ್ಮಕ ರನ್ ಎಂದುಕೊಂಡಿದ್ದೆ. ಆದರೂ ಕೆಲವೇ ರನ್ ಗಳ ಕೊರತೆಯಾಯಿತು. ಅಲ್ಲದೆ ಹಲವು ಕ್ಯಾಚ್ ಗಳನ್ನು ಕೈ ಚೆಲ್ಲಿದೆವು. ಈ ರೀತಿಯ ಪಂದ್ಯದಲ್ಲಿ ಇಂತಹ ತಪ್ಪುಗಳೇ ದುಬಾರಿಯಾಗುತ್ತವೆ’ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇನ್ನು, ಮುಂದಿನ ಪಂದ್ಯಗಳಿಗೆ ತಂಡದಲ್ಲಿ ಭಾರೀ ಬದಲಾವಣೆ ಮಾಡಲಾಗುವುದು ಎಂದು ಕೊಹ್ಲಿ ಹೇಳಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಸರಿಯಾದ ಕಾಂಬಿನೇಷನ್ ನೊಂದಿಗೆ ಕಣಕ್ಕಿಳಿಯುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA 1st Test: ಭಾರತದ ಗೆಲುವಿಗೆ 124 ರನ್‌ಗಳ ಗುರಿ ನೀಡಿದ ದಕ್ಷಿಣ ಆಫ್ರಿಕಾ ತಂಡ

ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದ ವೇಳೆ ಶುಭಮನ್‌ ಗಿಲ್‌ಗೆ ಗಾಯ: ಭಾರತ ತಂಡಕ್ಕೆ ಬಿಗ್‌ಶಾಕ್‌

IND vs SA Test: ಟೀಂ ಇಂಡಿಯಾ ನಾಳೆಯೇ ಟೆಸ್ಟ್ ಮ್ಯಾಚ್ ಮುಗಿಸೋದು ಪಕ್ಕಾ

IND vs SA: ಬ್ಯಾಟಿಂಗ್ ನಿಲ್ಲಿಸಿ ದಿಡಿರ್ ಮೈದಾನ ತೊರೆದ ಕ್ಯಾಪ್ಟನ್ ಶುಭಮನ್ ಗಿಲ್

ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾಗೆ ಅವಮಾನಕರ ಪದ ಬಳಸಿದ್ರಾ ಜಸ್ಪ್ರೀತ್ ಬುಮ್ರಾ video

ಮುಂದಿನ ಸುದ್ದಿ
Show comments