Select Your Language

Notifications

webdunia
webdunia
webdunia
webdunia

ಐಪಿಎಲ್: ಬೆಂಗಳೂರು ಪ್ಲೇ ಆಫ್ ಕನಸಿಗೆ ನೀರು ಹುಯ್ದ ವರುಣ

ಐಪಿಎಲ್: ಬೆಂಗಳೂರು ಪ್ಲೇ ಆಫ್ ಕನಸಿಗೆ ನೀರು ಹುಯ್ದ ವರುಣ
ಬೆಂಗಳೂರು , ಬುಧವಾರ, 1 ಮೇ 2019 (07:52 IST)
ಬೆಂಗಳೂರು: ಈ ಬಾರಿ ನಿರಾಶಾದಾಯಕ ಪ್ರದರ್ಶನದೊಂದಿಗೆ ಐಪಿಎಲ್ ಕೂಟ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿದೆ.


ನಿನ್ನೆ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ಇದರೊಂದಿಗೆ ಬೆಂಗಳೂರು ಪ್ಲೇ ಆಫ್ ಕನಸಿಗೂ ತಣ್ಣೀರೆರಚಿದಂತಾಗಿದೆ.

ಮಳೆಯಿಂದಾಗಿ ಪಂದ್ಯ 5 ಓವರ್ ಗಳಿಗೆ ಸೀಮಿತಗೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 7 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿತ್ತು. ಆದರೆ ರಾಜಸ್ಥಾನ್ 3.2 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 41 ರನ್ ಗಳಿಸಿದ್ದಾಗ ಮತ್ತೆ ಮಳೆ ಸುರಿದು ಪಂದ್ಯ ರದ್ದುಗೊಂಡಿತು. ಹೀಗಾಗಿ ಉಭಯ ತಂಡಗಳು ತಲಾ 1 ಅಂಕ ಹಂಚಿಕೊಂಡಿತು. ಪರಿಣಾಮ ಆರ್ ಸಿಬಿ ಪ್ಲೇ ಆಫ್ ನಿಂದ ಹೊರಬಿದ್ದರೆ ರಾಜಸ್ಥಾನ್ ಇನ್ನೂ ಪ್ಲೇ ಆಫ್ ಕನಸು ಜೀವಂತವಾಗಿಟ್ಟಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಈ ಬೌಲರ್ ನಾಲ್ಕು ಓವರ್ ಗೆ ನೀಡಿದ ರನ್ ಕೇಳಿದರೆ ಗಾಬರಿಯಾಗುತ್ತೀರಿ!