Webdunia - Bharat's app for daily news and videos

Install App

ಐಪಿಎಲ್: ಹೈದಾರಾಬಾದ್ ಬಿಟ್ಟು ತೆರಳಿದ ಡೇವಿಡ್ ವಾರ್ನರ್ ಗೆ ಭಾವುಕ ವಿದಾಯ ಹೇಳಿದ ತಂಡ

Webdunia
ಬುಧವಾರ, 1 ಮೇ 2019 (08:46 IST)
ಹೈದರಾಬಾದ್: ವಿಶ್ವಕಪ್ ಕ್ರಿಕೆಟ್ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಈ ಮಹತ್ವದ ಟೂರ್ನಿಗೆ ತಯಾರಾಗಲು ಒಬ್ಬೊಬ್ಬರೇ ಆಟಗಾರರು ಐಪಿಎಲ್ ನಿಂದ ಹೊರಬರುತ್ತಿದ್ದಾರೆ.

 

ಮೊಯಿನ್ ಅಲಿ, ಸ್ಟಾಯಿನಿಸ್ ಬಳಿಕ ಇದೀಗ ಸನ್ ರೈಸರ್ಸ್ ಹೈದಾರಾಬಾದ್ ತಂಡದ ಆಟಗಾರ ಡೇವಿಡ್ ವಾರ್ನರ್ ಕೂಡಾ ತಂಡದಿಂದ ಹೊರಬಂದಿದ್ದಾರೆ.

ಆಸ್ಟ್ರೇಲಿಯಾ ವಿಶ್ವಕಪ್ ತಂಡದಲ್ಲಿರುವ ವಾರ್ನರ್, ಸಿದ್ಧತಾ ಶಿಬಿರಕ್ಕೆ ಹಾಜರಾಗಲು ಐಪಿಎಲ್ ನಿಂದ ಹೊರಬಂದಿದ್ದಾರೆ. ಒಂದು ವರ್ಷಗಳ ನಿಷೇಧ ಶಿಕ್ಷೆ ಮುಗಿಸಿ ಐಪಿಎಲ್ ಮೂಲಕ ಕ್ರಿಕೆಟ್ ಗೆ ಪುನರಾಗಮನ ಮಾಡಿದ್ದ ಡೇವಿಡ್ ವಾರ್ನರ್ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದರು. ಈಗ ವಾರ್ನರ್ ಸೇರ್ಪಡೆ ಆಸ್ಟ್ರೇಲಿಯಾ ತಂಡಕ್ಕೆ ಬಲ ನೀಡಲಿದೆ.

ಆದರೆ ಹೈದರಾಬಾದ್ ಆಟಗಾರರು ಮಾತ್ರ ಪ್ರಮುಖ ಆಟಗಾರನನ್ನು ಮಹತ್ವದ ಘಟ್ಟದಲ್ಲಿ ಕಳೆದುಕೊಂಡು ಚಿಂತೆಯಲ್ಲಿದ್ದಾರೆ. ವಾರ್ನರ್ ಜತೆಗೆ ಫೋಟೋ ತೆಗೆಸಿಕೊಂಡ ಆಟಗಾರರು ‘ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದ್ದೇವೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ಎಂಟನೇ ಬಾರಿ ಮಹಿಳಾ ಏಷ್ಯಾ ಕಪ್ ಗೆದ್ದರೂ ಎಸಿಸಿ ಅಧ್ಯಕ್ಷ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತ

IND vs AFG: ಅಫ್ಘಾನಿಸ್ತಾನವನ್ನು ಚಚ್ಚಿ ಬಿಸಾಕಿದ ಅಭಿಷೇಕ್ ಶರ್ಮಾ

Asia Cup Final: ಏಷ್ಯಾ ಕಪ್ ಗೆಲ್ಲಲು ದೊಡ್ಡ ಗುರಿ ನೀಡಲು ಸಹಾಯ ಮಾಡಿದ ಶಫಾಲಿ ವರ್ಮ, ಸ್ಮೃತಿ ಮಂಧಾನ

ರಾಷ್ಟ್ರ ರಾಜಧಾನಿಯಲ್ಲಿ ಇಂದಿನಿಂದ ಭಾರತ-ಅಫ್ಗನ್‌ ಟಿ20 ಕದನ: ಶ್ರೇಯಸ್‌ ಅಯ್ಯರ್‌ ನಾಯಕತ್ವಕ್ಕೆ ಮತ್ತೆ ಅಗ್ನಿಪರೀಕ್ಷೆ

ಮಹಿಳಾ ಏಷ್ಯಾಕಪ್ ಫೈನಲ್ ಇಂದು: ಲಂಕಾ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ಹರ್ಮನ್‌ಪ್ರೀತ್‌ ಕೌರ್‌ ಕಾತರ

ಮುಂದಿನ ಸುದ್ದಿ
Show comments