Select Your Language

Notifications

webdunia
webdunia
webdunia
webdunia

ಆರ್ ಸಿಬಿ ಪಂದ್ಯದಲ್ಲಿ ನೋ ಬಾಲ್ ಗುರುತಿಸದ ಅಂಪಾಯರ್ ವಿರುದ್ಧ ಮುಗಿಬಿದ್ದ ಕ್ರಿಕೆಟಿಗರು

ಆರ್ ಸಿಬಿ ಪಂದ್ಯದಲ್ಲಿ ನೋ ಬಾಲ್ ಗುರುತಿಸದ ಅಂಪಾಯರ್ ವಿರುದ್ಧ ಮುಗಿಬಿದ್ದ ಕ್ರಿಕೆಟಿಗರು
ಬೆಂಗಳೂರು , ಶನಿವಾರ, 30 ಮಾರ್ಚ್ 2019 (08:42 IST)
ಬೆಂಗಳೂರು: ಮುಂಬೈ ಇಂಡಿಯನ್ಸ್ ಮತ್ತು ಆರ್ ಸಿಬಿ ನಡುವಿನ ಐಪಿಎಲ್ ಪಂದ್ಯದಲ್ಲಿ ಕೊನೆಯ ಬಾಲ್ ನ್ನು ನೋ ಬಾಲ್ ಎಂದು ಗುರುತಿಸದೇ ಪ್ರಮಾದ ಮಾಡಿದ ಅಂಪಾಯರ್ ವಿರುದ್ಧ ಕ್ರಿಕೆಟ್ ದಿಗ್ಗಜರು ಮುಗಿಬಿದ್ದಿದ್ದಾರೆ.


ಮಾಜಿ ಕ್ರಿಕೆಟಿಗರು, ತಜ್ಞರು ಆರ್ ಸಿಬಿ ಪಂದ್ಯದಲ್ಲಿ ಅಂಪಾಯರಿಂಗ್ ಮಾಡಿದ ಹೌಲರ್ ಸೇರಿದಂತೆ ಫೀಲ್ಡ್ ಮತ್ತು ಥರ್ಡ್ ಅಂಪಾಯರ್ ಗಳ ವಿರುದ್ಧ ಕಿಡಿ ಕಾರಿದ್ದಾರೆ.

ಮಾಜಿ ಕ್ರಿಕೆಟಿಗರಾದ ಬ್ರಿಯಾನ್ ಲಾರಾ, ಮೊಹಮ್ಮದ್ ಕೈಫ್, ಸಂಜಯ್ ಮಂಜ್ರೇಕರ್, ಕೆವಿನ್ ಪೀಟರ್ಸನ್, ಡೀನ್ ಜೋನ್ಸ್ ಅಲ್ಲದೆ, ವೀಕ್ಷಕ ವಿವರಣೆಕಾರ ಹರ್ಷ ಭೋಗ್ಲೆ ಮುಂತಾದವರು ಅಂಪಾಯರ್ ಗಳದ್ದು ಅಕ್ಷಮ್ಯ ಅಪರಾಧ ಎಂದು ಬಣ್ಣಿಸಿದ್ದಾರೆ. ಇದು ಪಂದ್ಯದ ದಿಕ್ಕನ್ನೇ ಬದಲಾಯಿಸಬಹುದಾದ ಬಾಲ್ ಆಗಿತ್ತು. ಆದರೆ ಅಂಪಾಯರ್ ಗಳು ತಪ್ಪು ಮಾಡಿದರು. ಕನಿಷ್ಠ ಸ್ಥಳದಲ್ಲಿದ್ದ ಟೆಕ್ನಾಲಜಿ ಬಳಸಬಹುದಿತ್ತು. ಔಟಾದರೆ ಮಾತ್ರ ನೋ ಬಾಲ್ ಆಗಿದೆಯಾ ಎಂದು ಪರಿಶೀಲಿಸುವುದನ್ನು ಇನ್ನಾದರೂ ಬಿಡಬೇಕು. ಇದರಿಂದ ಆರ್ ಸಿಬಿಗೆ ದೊಡ್ಡ ಅನ್ಯಾಯವಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿ ಸೋಲಿನ ಬಳಿಕ ಮ್ಯಾಚ್ ರೆಫರಿ ರೂಂಗೆ ನುಗ್ಗಿ ಕೂಗಾಡಿದ ವಿರಾಟ್ ಕೊಹ್ಲಿ! ಇದೀಗ ಶಿಸ್ತು ಕ್ರಮದ ಭೀತಿ