Webdunia - Bharat's app for daily news and videos

Install App

ಧೋನಿ ಕೈಯಲ್ಲಿ ಮೈದಾನದಲ್ಲೇ ಬೈಸಿಕೊಂಡ ಸಿಎಸ್ ಕೆ ಬೌಲರ್ ದೀಪಕ್ ಚಹರ್

Webdunia
ಸೋಮವಾರ, 8 ಏಪ್ರಿಲ್ 2019 (09:19 IST)
ಚೆನ್ನೈ: ಸಾಮಾನ್ಯವಾಗಿ ಧೋನಿ ಅಷ್ಟು ಬೇಗ ಮೈದಾನದಲ್ಲಿ ತಮ್ಮ ಭಾವನೆಗಳನ್ನು ತೋರ್ಪಡಿಸುವುದಿಲ್ಲ. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಧೋನಿ ಸಿಟ್ಟುಗೊಂಡಿದ್ದು ನೋಡಿ ಅಂಪಾಯರ್ ಕೂಡಾ ಅವಾಕ್ಕಾದ ಘಟನೆ ನಡೆದಿದೆ.


ಪಂಜಾಬ್ ಗೆಲುವಿಗೆ 12 ಬಾಲ್ ಗಳಲ್ಲಿ 32 ರನ್ ಬೇಕಾಗಿದ್ದಾಗ ದಾಳಿಗಿಳಿದ ದೀಪಕ್ ಚಹರ್ ಮೊದಲ ಎಸೆತವನ್ನು ನೋ ಬಾಲ್ ಎಸೆದರು. ಇದನ್ನು ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ಬೌಂಡರಿ ಬಾರಿಸಿದರು. ಮುಂದಿನ ಎಸೆತವನ್ನೂ ದೀಪಕ್ ನೋ ಬಾಲ್ ಎಸೆದರು. ಅದರಲ್ಲಿ ಎರಡು ರನ್ ಹರಿದುಬಂತು.

ಆದರೆ ಇಷ್ಟರಲ್ಲೇ ಧೋನಿ ಸಹನೆ ಕಟ್ಟೆಯೊಡೆದಿತ್ತು. ಸುರೇಶ್ ರೈನಾ ಜತೆಗೆ ನೇರವಾಗಿ ಬೌಲರ್ ಬಳಿಗೆ ಬಂದ ಧೋನಿ ಸರಿಯಾಗಿ ಬೈದು ಬುದ್ಧಿ ಹೇಳಿದರು. ಧೋನಿ ಕೋಪಗೊಂಡು ಬಂದಿದ್ದನ್ನು ನೋಡಿ ಅಂಪಾಯರ್ ಕೂಡಾ ಅವಾಕ್ಕಾಗಿ ನೋಡುತ್ತಾ ನಿಂತರು. ಆದರೆ ಧೋನಿ ಕೈಯಲ್ಲಿ ಬೈಸಿಕೊಂಡ ಮೇಲೆ ಬುದ್ಧಿ ಕಲಿತುಕೊಂಡ ದೀಪಕ್ ಮುಂದಿನ ಎಸೆತಗಳನ್ನು ಸರಿಯಾಗಿಯೇ ಹಾಕಿದರು!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಗ್ರ್ಯಾಂಡ್ ಚೆಸ್ ಟೂರ್‌ ಫೈನಲ್‌ನಲ್ಲಿ ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ: ಈ ಕಿರೀಟ ಗೆದ್ದ ಮೊದಲ ಭಾರತೀಯ

ಭಾರತ ಮಹಿಳಾ ಕ್ರಿಕೆಟ್ ತಂಡದ ಏಷ್ಯಾ ಕಪ್ ವೇಳಾಪಟ್ಟಿ, ನೇರಪ್ರಸಾರ ಎಲ್ಲಿ ಇಲ್ಲಿದೆ ವಿವರ

IND vs SL: ಫಾಲೋ ಆನ್ ಹೇರಿಯೂ ಗೆಲ್ಲಲಾಗಲಿಲ್ಲ… ಡ್ರೆಸ್ಸಿಂಗ್ ರೂಂನಲ್ಲಿ ಶುಭಮನ್ ಗಿಲ್ ಗೆ ಗಂಭೀರ್ ಕ್ಲಾಸ್

INDvsSL: ವಿಕೆಟ್ ಬೀಳುತ್ತಿಲ್ಲ ಎಂದಾಗ ನಂಬಿಕೆಯ ಮೊರೆ ಹೋದ ಸಿರಾಜ್, ಮ್ಯಾಜಿಕ್ ಮಾಡಿದಾಗ ಬಿತ್ತು ವಿಕೆಟ್

INDvsSL: ಶ್ರೀಲಂಕಾಗೆ ಫಾಲೋ ಆನ್ ಹೇರಿ ತಲೆಮೇಲೆ ಕೈಹೊತ್ತ ಟೀಂ ಇಂಡಿಯಾ, ಪೆವಿಲಿಯನ್ ನಲ್ಲೇ ಗಂಭೀರ್ ಸಿಟ್ಟು

ಮುಂದಿನ ಸುದ್ದಿ
Show comments