Select Your Language

Notifications

webdunia
webdunia
webdunia
webdunia

‘ಭಾರತ ತಂಡ ಆಡುವುದನ್ನು ನೋಡುತ್ತಿದ್ದರೆ ಹತಾಶೆಯಾಗುತ್ತಿತ್ತು’

‘ಭಾರತ ತಂಡ ಆಡುವುದನ್ನು ನೋಡುತ್ತಿದ್ದರೆ ಹತಾಶೆಯಾಗುತ್ತಿತ್ತು’
Mumbai , ಸೋಮವಾರ, 3 ಏಪ್ರಿಲ್ 2017 (09:20 IST)
ಮುಂಬೈ: ಟೀಂ ಇಂಡಿಯಾ ಆಡುವುದನ್ನು ನೋಡುತ್ತಿದ್ದರೆ ನನಗೆ ಹತಾಶೆಯಾಗುತ್ತಿತ್ತು. ಛೇ.. ನನಗೆ ಮೈದಾನದಲ್ಲಿ ಆಡಲಾಗುತ್ತಿಲ್ಲವಲ್ಲಾ ಎಂದು ನಿರಾಸೆಯಾಗುತ್ತಿತ್ತು ಎಂದು ಗಾಯದಿಂದ ಚೇತರಿಸಿಕೊಂಡ ಕ್ರಿಕೆಟಿಗ ರೋಹಿತ್ ಶರ್ಮಾ ಹೇಳಿದ್ದಾರೆ.


 
ಮುಂಬೈ ಪರ ಐಪಿಎಲ್ ಆಡಲು ಸಿದ್ಧರಾದ ರೋಹಿತ್ ಶರ್ಮಾ ಈಗಷ್ಟೇ ಗಾಯದಿಂದ ಚೇತರಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ಸರಣಿಯಲ್ಲಿ ಗಾಯಗೊಂದಿದ್ದ ಅವರು ಶಸ್ತ್ರಚಿಕಿತ್ಸೆಗೊಳಗಾದ ಮೇಲೆ ಹಲವು ದಿನಗಳ ಕಾಲ ಕ್ರಿಕೆಟ್ ನಿಂದ ದೂರವುಳಿದಿದ್ದರು.

 
ಸುಮಾರು ಐದು ತಿಂಗಳು ಕ್ರಿಕೆಟ್ ನಿಂದ ದೂರವಿದ್ದು ನನಗೆ ಹತಾಶೆಯಾಗಿತ್ತು. ಆದರೆ ಇದೆಲ್ಲವೂ ಕ್ರೀಡಾಳುಗಳ ಜೀವನದ ಭಾಗ. ಸದ್ಯಕ್ಕೆ ನಾನು ಹಿಂತಿರುಗಿ ನೋಡುವುದಿಲ್ಲ. ಭವಿಷ್ಯದತ್ತ ನೋಡಲು ಬಯಸುತ್ತೇನೆ ಎಂದು ರೋಹಿತ್ ಹೇಳಿಕೊಂಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಅಂತಿಮ ನಾಕೌಟ್ ಪಂದ್ಯ ನಡೆಯುವ ಮೈದಾನ ಫಿಕ್ಸ್