Select Your Language

Notifications

webdunia
webdunia
webdunia
webdunia

ಐಪಿಎಲ್: ಅಂತಿಮ ನಾಕೌಟ್ ಪಂದ್ಯ ನಡೆಯುವ ಮೈದಾನ ಫಿಕ್ಸ್

ಐಪಿಎಲ್: ಅಂತಿಮ ನಾಕೌಟ್ ಪಂದ್ಯ ನಡೆಯುವ ಮೈದಾನ ಫಿಕ್ಸ್
Mumbai , ಸೋಮವಾರ, 3 ಏಪ್ರಿಲ್ 2017 (08:36 IST)
ಮುಂಬೈ: ಐಪಿಎಲ್ 10 ನೇ ಆವೃತ್ತಿಯ ಅಂತಿಮ ಹಂತದ ನಾಕೌಟ್ ಪಂದ್ಯಗಳು ನಡೆಯಲಿರುವ ಸ್ಥಳ ನಿಗದಿಯಾಗಿದ್ದು, ಬಿಸಿಸಿಐ ಘೋಷಣೆ ಮಾಡಿದೆ.

 

ಮೇ 16ರಂದು ನಡೆಯಲಿರುವ ಮೊದಲ ನಾಕೌಟ್ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ. ಬೆಂಗಳೂರಿಗೆ ಎರಡು ಪಂದ್ಯಗಳ ಆತಿಥ್ಯ ಸಿಕ್ಕಿದೆ. ಮೇ 17 ರಂದು ನಡೆಯಲಿರುವ ಎಲಿಮಿನೇಟರ್ ಮತ್ತು ಮೇ 19 ರಂದು ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯ ಚಿನ್ನಸ್ವಾಮಿ ಅಂಗಣದಲ್ಲಿ ನಡೆಯಲಿದೆ.

 
ಅಗ್ರ ಎರಡು ತಂಡಗಳ ನಡುವೆ ಕ್ವಾಲಿಫೈಯರ್ 1 ನೇ ಪಂದ್ಯ ನಡೆಯಲಿದೆ. ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಗಳು ಎರಡನೇ ಕ್ವಾಲಿಫೈಯರ್ ಪಂದ್ಯ ಆಡಲಿದ್ದಾರೆ.  ಕ್ವಾಲಿಫೈಯರ್ ನಲ್ಲಿ ಸೋತ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಲಿವೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಜನರಿಗೆ ಐಪಿಎಲ್ ಗಿಂತ ಪಾಕ್ ಕ್ರಿಕೆಟ್ ಲೀಗ್ ಇಷ್ಟ’