Publish Date: Wed, 26 Apr 2017 (07:19 IST)
Updated Date: Wed, 26 Apr 2017 (07:21 IST)
ಮುಂಬೈ: ಐಪಿಎಲ್ ನ ಕಳೆದೆರಡು ಪಂದ್ಯಗಳಲ್ಲಿ ಪುಣೆ ಗೆಲುವಿನ ರೂವಾರಿಯಾಗಿದ್ದೇ ತಡ. ಎಂಎಸ್ ಧೋನಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಇದೀಗ ಶಾರುಖ್ ಖಾನ್ ಗೆ ಧೋನಿ ಮೇಲೆ ಪ್ರೀತಿ ಬಂದಿದೆ.
ಶಾರುಖ್ ಖಾನ್ ತಮ್ಮ ಪೈಜಾಮು ಮಾರಾಟ ಮಾಡಿಯಾದರೂ ಧೋನಿಯನ್ನು ಮುಂದಿನ ಆವೃತ್ತಿಗೆ ಖರೀದಿಸುವೆ ಎಂದು ಹೇಳಿಕೊಂಡಿದ್ದಾರೆ. ಆದರೇನು ಮಾಡುವುದು ಅವರು ಹರಾಜಿನ ಪಟ್ಟಿಯಲ್ಲಿ ಬರುವುದೇ ಇಲ್ಲ ಎಂದು ಅಭಿಮಾನಿಗಳಲ್ಲಿ ಅಳಲು ತೋಡಿಕೊಂಡಿದ್ದಾರೆ.
ಮುಂದಿನ ವರ್ಷ ಧೋನಿ ಹರಾಜು ಪಟ್ಟಿಗೆ ಸೇರಿಕೊಳ್ಳಲಿದ್ದಾರೆ. ಆದರೆ ಧೋನಿಯನ್ನು ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್ ತುದಿಗಾಲಲ್ಲಿ ನಿಂತಿದೆ. ಚೆನ್ನೈ ತಂಡ ಮುಂದಿನ ಆವೃತ್ತಿಯ ಐಪಿಎಲ್ ಗಾಗುವಾಗ ನಿಷೇಧ ಶಿಕ್ಷೆ ಮುಗಿಸಿ ಕಣಕ್ಕಿಳಿಯಲಿದೆ.
ಹೇಗಿದ್ದರೂ, ಪ್ರಸಕ್ತ ಧೋನಿ ಆಡುತ್ತಿರುವ ಪುಣೆ ತಂಡದ ಮಾಲಿಕರ ಜತೆ ಧೋನಿ ಮುಸುಕಿನ ಗುದ್ದಾಟ ನಡೆಸುತ್ತಿದ್ದಾರೆ. ಹಾಗಾಗಿ ಚೆನ್ನೈ ಈಗಾಗಲೇ ಮುಂದಿನ ವರ್ಷ ತಮ್ಮ ತಂಡಕ್ಕೆ ಧೋನಿಯನ್ನು ನಾಯಕನಾಗಿಸುವ ಇಂಗಿತ ವ್ಯಕ್ತಪಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ