Publish Date: Thu, 20 Apr 2017 (07:15 IST)
Updated Date: Thu, 20 Apr 2017 (07:20 IST)
ಹೈದರಾಬಾದ್: ಸದ್ಯಕ್ಕೆ ಐಪಿಎಲ್ 10 ಚಾಲ್ತಿಯಲ್ಲಿದೆ. ತಂಡಗಳಿಗೆ ನಿದ್ದೆ ಮಾಡಲೂ ಪುರುಸೊತ್ತಿಲ್ಲ. ಅಷ್ಟು ಬ್ಯುಸಿ ಎನ್ನುವುದನ್ನು ಯುವರಾಜ್ ಸಿಂಗ್ ತೋರಿಸಿದ್ದಾರೆ ನೋಡಿ.
ಯುವರಾಜ್ ಸಿಂಗ್ ಸಹ ಆಟಗಾರರ ಕಾಲೆಳೆಯುವಲ್ಲಿ ನಿಸ್ಸೀಮ. ಇಂದೂ ಕೂಡಾ ಪಾಪ ಏನೋ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ವಿವಿಎಸ್ ಲಕ್ಷ್ಮಣ್ ಕೆಲ ಕಾಲ ನಿದ್ದೆಗೆ ಜಾರಿದ್ದಾರೆ. ಅದಕ್ಕೇ ಕಾಯುತ್ತಿದ್ದವರಂತೆ ಯುವಿ ನಿದ್ದೆ ಮಾಡುತ್ತಿದ್ದ ಲಕ್ಷ್ಮಣ್ ಫೋಟೋ ತೆಗೆದು ಟ್ವಿಟರ್ ನಲ್ಲಿ ಪ್ರಕಟಿಸಿಯೇ ಬಿಟ್ಟರು.
ಪಕ್ಕದಲ್ಲೇ ಕೂತಿದ್ದ ಶ್ರೀಲಂಕಾದ ಮಾಜಿ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಕಳ್ಳ ನಗು ನಗುತ್ತಿದ್ದರೇ ಹೊರತು ಲಕ್ಷ್ಮಣ್ ರನ್ನು ಎಚ್ಚರಿಸುವ ಗೋಜಿಗೆ ಹೋಗಲಿಲ್ಲ. ಹೀಗಾಗಿ ಕನ್ನಡಕದ ಒಳಗೆ ನಿದ್ದೆ ಹೊಡೆಯುತ್ತಿದ್ದ ಲಕ್ಷ್ಮಣ್ ಫೋಟೋ ಜತೆಗೆ, ನೋಡಿ ನಮ್ಮ ಗೊರಕೆ ಹೊಡೆಯುತ್ತಿರುವ ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಎಂಬ ಅಡಿಬರಹದೊಂದಿಗೆ ಪ್ರಕಟವೂ ಆಯ್ತು!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ