Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಗಡ್ಡ ಎಳೆದ ಹುಡುಗಿ ಇವಳ್ಯಾರೇ?!

ವಿರಾಟ್ ಕೊಹ್ಲಿ ಗಡ್ಡ ಎಳೆದ ಹುಡುಗಿ ಇವಳ್ಯಾರೇ?!
Mumbai , ಮಂಗಳವಾರ, 2 ಮೇ 2017 (11:56 IST)
ಮುಂಬೈ: ಆರ್ ಸಿಬಿ ಸೋತು ಈ ವರ್ಷದ ಐಪಿಎಲ್ ಯಾತ್ರೆ ಮುಗಿಸಿದ ಮೇಲೆ ವಿರಾಟ್ ಕೊಹ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಸೋಲಿನ ನೋವು ಮರೆಯಲು ಅವರು ಹೊಸ ದಾರಿ ಕಂಡುಕೊಂಡಿದ್ದಾರೆ.

 
ಆ ಹುಡುಗಿ ನೇರವಾಗಿ ಕೊಹ್ಲಿ ದಾಡಿಗೇ ಕೈ ಹಾಕಿದ್ದಾಳೆ. ಆದರೂ ಕೊಹ್ಲಿ ಬೇಜಾರು ಮಾಡಿಕೊಂಡಿಲ್ಲ. ಬದಲಾಗಿ ಫುಲ್ ಖುಷ್ ಆಗಿದ್ದಾರೆ. ಅಷ್ಟಕ್ಕೂ ಆ ಹುಡುಗಿ ಯಾರು ಗೊತ್ತಾ?

ಹರ್ಭಜನ್ ಸಿಂಗ್ ಮುದ್ದಾದ ಪುತ್ರಿ ಹಿನಯಾ. ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯ ಮುಗಿದ ಮೇಲೆ ವಿರಾಟ್ ಎದುರಾಳಿ ತಂಡದ ಆಟಗಾರನ ಪುತ್ರಿಯ ಜತೆ ಕೆಲ ಕಾಲ ಆಡಿ ಖುಷಿಪಟ್ಟಿದ್ದಲ್ಲದೆ, ಸೆಲ್ಫೀ ತೆಗೆದು ಟ್ವಿಟರ್ ನಲ್ಲಿ ಹಾಕಿದ್ದಾರೆ.

ಹಿಂದೆಯೂ ಒಮ್ಮೆ ವಿರಾಟ್ ಭಜಿ ಪುತ್ರಿ ಜತೆ ಆಡುತ್ತಿರುವ ಚಿತ್ರ ಪ್ರಕಟಿಸಿದ್ದರು. ಆಗ ಹಿನಯಾ ಕೊಹ್ಲಿ ಫೋನ್ ಕಿವಿಗಿಟ್ಟುಕೊಂಡು ಖುಷಿಪಡುತ್ತಿದ್ದರು. ಇದೀಗ ಕೊಹ್ಲಿ-ಹಿನಯಾ ಫೋಟೋ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಪುಣೆ ಸೂಪರ್ ಜೈಂಟ್ ಗಳಿಗೆ ಆಸರೆಯಾದ ಬೆನ್ ಸ್ಟೋಕ್ಸ್