Select Your Language

Notifications

webdunia
webdunia
webdunia
webdunia

ಐಪಿಎಲ್: ಪುಣೆ ಸೂಪರ್ ಜೈಂಟ್ ಗಳಿಗೆ ಆಸರೆಯಾದ ಬೆನ್ ಸ್ಟೋಕ್ಸ್

ಐಪಿಎಲ್: ಪುಣೆ ಸೂಪರ್ ಜೈಂಟ್ ಗಳಿಗೆ ಆಸರೆಯಾದ ಬೆನ್ ಸ್ಟೋಕ್ಸ್
Pune , ಮಂಗಳವಾರ, 2 ಮೇ 2017 (07:44 IST)
ಪುಣೆ: ದುಬಾರಿ ಬೆಲೆಗೆ ಹರಾಜಾದ ಆಟಗಾರರು ಚೆನ್ನಾಗಿ ಆಡಲ್ಲ ಎಂಬ ನಂಬಿಕೆಯನ್ನು ಈ ಬಾರಿ ಬೆನ್ ಸ್ಟೋಕ್ಸ್ ಹುಸಿಗೊಳಿಸಿದರು. ಶತಕ ಭಾರಿಸುವ ಮೂಲಕ ಗುಜರಾತ್ ಲಯನ್ಸ್ ವಿರುದ್ಧ ಪುಣೆ ಸೂಪರ್ ಜೈಂಟ್ ತಂಡಕ್ಕೆ 5 ವಿಕೆಟ್ ಗಳ ಜಯಮಾಲೆ ತೊಡಿಸಿದರು.

 
ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಲಯನ್ಸ್ 161 ರನ್ ಗಳ ಗುರಿ ನೀಡಿತು. ಬ್ರೆಂಡಮ್ ಮೆಕ್ಕಲಂ 45 ಮತ್ತು ಇಶಾನ್ ಕಿಶನ್ 31 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಪುಣೆ ಪರ ಜಯದೇವ್ ಉನಾದ್ಕಟ್ 3 ವಿಕೆಟ್ ಕಿತ್ತರು.

ನಂತರ ಬ್ಯಾಟಿಂಗ್ ಮಾಡಿದ ಪುಣೆಗೆ ಬೆನ್ ಸ್ಟೋಕ್ಸ್ ಚೇಸಿಂಗ್ ವೀರರಾದರು. 63 ಎಸೆತಗಳಲ್ಲಿ 103 ರನ್ ಗಳಿಸಿ ಅಜೇಯರಾಗುಳಿದರು. ಉಳಿದಂತೆ ಎಂಎಸ್ ಧೋನಿ 26 ರನ್ ಗಳಿಸಿದ್ದೇ ದೊಡ್ಡ ಮೊತ್ತವಾಗಿತ್ತು. ಅಂತೂ 19.5 ಓವರ್ ಗಳಲ್ಲಿ ಪುಣೆ ಗುರಿ ಮುಟ್ಟಿತು.

ಇದರೊಂದಿಗೆ ಪುಣೆ ರೈಸರ್ಸ್ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿತು. ಅಲ್ಲದೆ, ಪ್ಲೇ ಆಫ್ ಹಂತಕ್ಕೂ ಅಂತಿಮ ಕ್ಷಣದಲ್ಲಿ ಅರ್ಹತೆ ಪಡೆಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಂದು ಸೋಲಿನೊಂದಿಗೆ ಆರ್ ಸಿಬಿ ಐಪಿಎಲ್ ಪಯಣ ಅಂತ್ಯ