Publish Date: Mon, 15 May 2017 (08:49 IST)
Updated Date: Mon, 15 May 2017 (08:51 IST)
ನವದೆಹಲಿ: ಸದಾ ತಮಾಷೆ ಮಾಡಿಕೊಂಡು, ಕೂಲ್ ಆಗಿರುವ ವೀರೇಂದ್ರ ಸೆಹ್ವಾಗ್ ಗೂ ಐಪಿಎಲ್ ನಲಲ್ಲಿ ತಮ್ಮ ತಂಡದ ಸೋಲು ನೋಡಿ ಸಿಟ್ಟು ಬಂದಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೆಂಟರ್ ಆಗಿರುವ ಸೆಹ್ವಾಗ್ ತಮ್ಮ ತಂಡದ ನಾಯಕ ಗ್ಲೆನ್ ಮ್ಯಾಕ್ಸ್ ವೆಲ್ ಕಾರ್ಯ ವೈಖರಿ ಬಗ್ಗೆ ಸಿಟ್ಟಾಗಿದ್ದಾರೆ. ಪುಣೆ ರೈಸರ್ಸ್ ತಂಡದ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಹೀನಾಯ ಸೋಲಿನ ನಂತರ ವೀರೂ ನಾಯಕನ ಬೇಜವಾಬ್ದಾರಿಯುತ ನಾಯಕತ್ವದ ಬಗ್ಗೆ ಕಿಡಿ ಕಾರಿದ್ದಾರೆ.
‘ಮ್ಯಾಕ್ಸ್ ವೆಲ್ ಸಿಡಿದಿದ್ದರೆ ನಾವು ಪಂದ್ಯ ಗೆಲ್ಲಬಹುದಿತ್ತು. ಆದರೆ ಅವರು ಅಗತ್ಯ ಬಂದಾಗ ಅಂತಹ ಇನಿಂಗ್ಸ್ ಆಡಲೇ ಇಲ್ಲ. ಅದು ನಮಗೆ ನಿಜಕ್ಕೂ ನಿರಾಶಾದಾಯಕವಾಗಿತ್ತು. ಅನುಭವಿಯಾಗಿದ್ದುಕೊಂಡು ಅವರು ತಂಡದ ಜವಾಬ್ದಾರಿ ಹೊರಲಿಲ್ಲ’ ಎಂದು ವೀರೂ ಕಿಡಿ ಕಾರಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕೇವಲ 73 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ 9 ವಿಕೆಟ್ ಗಳಿಂದ ಹೀನಾಯ ಸೋಲನುಭವಿಸಿತ್ತು. ಮ್ಯಾಕ್ಸ್ ವೆಲ್ ಶೂನ್ಯಕ್ಕೆ ಔಟಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ