Select Your Language

Notifications

webdunia
webdunia
webdunia
webdunia

ಐಪಿಎಲ್ ಫೈನಲ್ ಗೂ ಮೊದಲು ವಿರಾಟ್ ಕೊಹ್ಲಿ ನಡೆಸಲಿದ್ದಾರೆ ಮಹತ್ವದ ಮೀಟಿಂಗ್!

ಐಪಿಎಲ್ ಫೈನಲ್ ಗೂ ಮೊದಲು ವಿರಾಟ್ ಕೊಹ್ಲಿ ನಡೆಸಲಿದ್ದಾರೆ ಮಹತ್ವದ ಮೀಟಿಂಗ್!
Mumbai , ಸೋಮವಾರ, 15 ಮೇ 2017 (12:01 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಫೈನಲ್ ಗೂ ಮೊದಲು ಬಿಸಿಸಿಐನ ಆಡಳಿತ ಮಂಡಳಿ ಅಧಿಕಾರಿಗಳನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.

 
ಈ ಸಂದರ್ಭದಲ್ಲಿ ಕೊಹ್ಲಿ ಟೀಂ ಇಂಡಿಯಾ ಆಟಗಾರರ ವೇತನ ಹೆಚ್ಚಳ ಮತ್ತು ವೇತನ ವ್ಯವಸ್ಥೆ ಬದಲಾಯಿಸಲು ಒತ್ತಾಯಿಸಲಿದ್ದಾರೆ. ಹಿರಿಯ ಆಟಗಾರರು ಸೇರಿದಂತೆ ಹಲವರು ಪ್ರಸಕ್ತ ವೇತನ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಒತ್ತಾಯಿಸುತ್ತಿದ್ದಾರೆ.

ವಿಶ್ವದ ಇತರ ಕ್ರಿಕೆಟಿಗರಿಗೆ ಹೋಲಿಸಿದರೆ ಭಾರತೀಯ ಕ್ರಿಕೆಟಿಗರ ತೀರಾ ಕಡಿಮೆ. ಇದು ಸರಿಯಲ್ಲ ಎನ್ನುವುದು ಕ್ರಿಕೆಟಿಗರ ಒತ್ತಾಯ. ಇದಲ್ಲದೆ ಕಳೆದ ಆರು ತಿಂಗಳಿನಿಂದ ಭಾರತೀಯ ಕ್ರಿಕೆಟಿಗರಿಗೆ ವೇತನ ಮತ್ತು ಇತರ ಭತ್ಯೆ ಬಾಕಿಯಿದೆ.

ಇದೆಲ್ಲವನ್ನೂ ಆದಷ್ಟು ಬೇಗ ಸರಿಪಡಿಸುವಂತೆ ಕೊಹ್ಲಿ ಕೇಳಿಕೊಳ್ಳಲಿದ್ದಾರೆ. ಯಾವುದೇ ಕಾರಣಕ್ಕೂ ಕ್ರಿಕೆಟಿಗರು ತಾವು ಬಯಸಿದ್ದಕ್ಕಿಂತ ಕಡಿಮೆ ವೇತನಕ್ಕೆ ಒಪ್ಪುವ ಸಾಧ್ಯತೆಯೇ ಇಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮೇ 21 ರಂದು ನಡೆಯಲಿರುವ ಸಭೆ ಕ್ರಿಕೆಟಿಗರ ಪಾಲಿಗೆ ಮಹತ್ವದ್ದಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

‘ಕೂಲ್’ ವೀರೇಂದ್ರ ಸೆಹ್ವಾಗ್ ಗರಂ ಆಗಿದ್ದೇಕೆ?