Publish Date: Fri, 19 May 2017 (07:09 IST)
Updated Date: Fri, 19 May 2017 (07:13 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅನೇಕ ಮಂದಿ ಹುಚ್ಚು ಅಭಿಮಾನಿಗಳಿದ್ದಾರೆ. ಆದರೆ ಈಕೆ ಅಂತಿಂಥಾ ಅಭಿಮಾನಿಯಲ್ಲ. ಆಕೆಯ ಹೆಸರಿನಲ್ಲೇ ವಿಶೇಷತೆಯಿದೆ.
ಆಕೆ ಬೇರಾರೂ ಅಲ್ಲ. ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಪುತ್ರಿ ಇಂಡಿಯಾ ರೋಡ್ಸ್. ಭಾರತದ ಮೇಲಿನ ಪ್ರೀತಿಯಿಂದ ಜಾಂಟಿ ತಮ್ಮ ಪುತ್ರಿಗೆ ಇಂಡಿಯಾ ಎಂದು ಹೆಸರಿಟ್ಟಿದ್ದರು. ಇತ್ತೀಚೆಗೆ ಆಕೆಯ ಜನುಮ ದಿನಕ್ಕೆ ಸ್ವತಃ ಭಾರತದ ಪ್ರಧಾನಿ ಮೋದಿ ವಿಶ್ ಮಾಡಿದ್ದನ್ನು ಸ್ಮರಿಸಿಕೊಳ್ಳಬಹುದು.
ಜಾಂಟಿ ಸದ್ಯಕ್ಕೆ ಮುಂಬೈ ಇಂಡಿಯನ್ಸ್ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಭಾರತದಲ್ಲಿದ್ದಾರೆ. ಇದೀಗ ತಮ್ಮ ಪುತ್ರಿಯ ವಿರಾಟ್ ಪ್ರೀತಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಅವರು ಕೊಹ್ಲಿ ಭಾವಚಿತ್ರದೊಂದಿಗೆ ನಿಂತಿರುವ ತಮ್ಮ ಪುತ್ರಿ ಭಾವಚಿತ್ರವನ್ನು ಪ್ರಕಟಿಸಿದ್ದಾರೆ. ಜತೆಗೆ ಕೊಹ್ಲಿ ಅಭಿಮಾನಿ ಬಳಗಕ್ಕೆ ಇನ್ನೊಬ್ಬರ ಸೇರ್ಪಡೆ ಎಂದು ಬರೆದಿದ್ದಾರೆ.
ಇದಕ್ಕೆ ಕೊಹ್ಲಿ ಕೂಡಾ ಪ್ರತಿಕ್ರಿಯಿಸಿದ್ದು, ಅಬ್ಬಾ… ಕ್ಯೂಟ್ ಹುಡುಗಿ. ಆಕೆಯ ಬ್ಯಾಗ್ ನಲ್ಲಿ ಏನಿದೆ ಎಂದು ತಿಳಿಯಬಹುದಾ ಎಂದು ಟ್ವಿಟರ್ ನಲ್ಲೇ ಮಗುವನ್ನು ಮುದ್ದಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ