Select Your Language

Notifications

webdunia
webdunia
webdunia
webdunia

ಐಸಿಸಿ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಸ್ಥಾನಕ್ಕೆ ಭಂಗವಿಲ್ಲ

ಐಸಿಸಿ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಸ್ಥಾನಕ್ಕೆ ಭಂಗವಿಲ್ಲ
Dubai , ಶುಕ್ರವಾರ, 19 ಮೇ 2017 (07:04 IST)
ದುಬೈ: ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಯಥಾಸ್ಥಾನ ಕಂಡುಕೊಂಡಿದೆ. ಕಳೆದ ಒಂದು ತಿಂಗಳಿನಿಂದ ಯಾವುದೇ ಟೆಸ್ಟ್ ಸರಣಿ ಆಡದಿದ್ದರೂ, ಭಾರತದ ಸ್ಥಾನಕ್ಕೆ ಧಕ್ಕೆಯಾಗಿಲ್ಲ.

 
123 ಅಂಕಗಳೊಂದಿಗೆ ಭಾರತ ದ್ವಿತೀಯ ಸ್ಥಾನಿ ದ. ಆಫ್ರಿಕಾ ತಂಡಕ್ಕಿಂತ 6 ಅಂಕ ಮುಂದಿದೆ. ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವಿದೆ. ಆಸ್ಟ್ರೇಲಿಯಾ ಮತ್ತು ದ. ಆಫ್ರಿಕಾ ತಂಡಗಳ ನಡುವೆ ಕೇವಲ 3 ಅಂಕಗಳ ವ್ಯತ್ಯಾಸವಿದೆ.

ಅತ್ತ ಬಾಂಗ್ಲಾದೇಶ 9 ನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ಕೇವಲ ಒಂದು ಸ್ಥಾನ ಮೇಲಿದ್ದು, 8 ನೇ ಸ್ಥಾನದಲ್ಲಿದೆ.  ಶ್ರೀಲಂಕಾ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿಯಿಂದ ಮನೀಶ್ ಪಾಂಡೆ ಔಟ್