Select Your Language

Notifications

webdunia
webdunia
webdunia
webdunia

ಚಾಂಪಿಯನ್ಸ್ ಟ್ರೋಫಿಯಿಂದ ಮನೀಶ್ ಪಾಂಡೆ ಔಟ್

ಚಾಂಪಿಯನ್ಸ್ ಟ್ರೋಫಿಯಿಂದ ಮನೀಶ್ ಪಾಂಡೆ ಔಟ್
ಮುಂಬೈ , ಗುರುವಾರ, 18 ಮೇ 2017 (22:06 IST)
ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಿದ್ದ ಕನ್ನಡಿಗ ಮನೀಶ್ ಪಾಂಡೆ ಅಭ್ಯಾಸದ ವೇಳೆ ಗಾಯಗೊಂಡಿದ್ದು, ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮನೀಶ್ ಪಾಂಡೆ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಅವರನ್ನ ಆಯ್ಕೆ ಮಾಡಲಾಗಿದೆ.

ಚಾಂಪಿಯನ್ಸ್ ಟ್ರೋಫಿ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ದಿನೇಶ್ ಕಾರ್ತಿಕ್ ಅಂತಿಮ 15ರಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಮನೀಶ್ ಪಾಂಡೆ ಗಾಯಗೊಂಡಿದ್ದರಿಂದ ಕಾರ್ತಿಕ್`ಗೆ ಚಾನ್ಸ್ ಸಿಕ್ಕಿದೆ.

ಐಪಿಎಲ್`ನಲ್ಲಿ ಕೋಲ್ಕತ್ತಾ ತಂಡದಲ್ಲಿರುವ ಮನೀಶ್ ಪಾಂಡೆ 14 ಪಂದ್ಯಗಳಲ್ಲಿ 396 ರನ್ ಗಳಿಸಿ ತಂಡದ ನಂಬಿಕಸ್ಥ ಬ್ಯಾಟ್ಸ್`ಮನ್ ಆಗಿದ್ದರು. ಇದೀಗ, ಗಾಯಗೊಂಡು ನಿನ್ನೆಯ ಪ್ಲೇಆಫ್ಸ್ ಎಲಿಮಿನೇಟರ್ ಪಂದ್ಯದಲ್ಲೂ ಆಡಿರಲಿಲ್ಲ. ನಾಳೆ ಬೆಂಗಳೂರಲ್ಲಿ ನಡೆಯಲಿರುವ ಮುಂಬೈ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲೂ ಮನೀಶ್ ಪಾಂಡೆ ಆಡುತ್ತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೈದ್ರಾಬಾದ್`ಗೆ ತಟ್ಟಿದ ಆರೆಂಜ್ ಕ್ಯಾಪ್ ಶಾಪ..? ಸನ್ ರೈಸರ್ಸ್ ಸೋಲಿನ ಹಿಂದಿದೆ ಕುತೂಹಲಕಾರಿ ಲೆಕ್ಕಾಚಾರ