Publish Date: Sun, 30 Apr 2017 (06:59 IST)
Updated Date: Sun, 30 Apr 2017 (07:03 IST)
ಬೆಂಗಳೂರು: ನಿನ್ನೆ ಪುಣೆ ಸೂಪರ್ ಜೈಂಟ್ ಗಳ ಮೇಲೆ ಆರ್ ಸಿಬಿಗೆ ಮತ್ತೊಂದು ಸೋಲು. ಮೊದಲೇ ಕೋಪಿಷ್ಠ ಕೊಹ್ಲಿ. ಇದೀಗ ಅವರ ಸಿಟ್ಟು ತಮ್ಮ ತಂಡದ ಹುಡುಗರ ಮೇಲೆ ವ್ಯಕ್ತವಾಗಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಪುಣೆ ವಿರುದ್ಧ 61 ರನ್ ಗಳ ಹೀನಾಯ ಸೋಲುಂಡ ನಂತರ ಕೊಹ್ಲಿ ಇಂತಹ ಪರಿಸ್ಥಿತಿಯಲ್ಲಿ ಒಬ್ಬ ನಾಯಕನಾಗಿ ಏನೆಂದು ಹೇಳಲಿ? ಆದರೂ ಮಾತನಾಡಲೇಬೇಕಾದ ಅನಿವಾರ್ಯತೆ ನನ್ನದು ಎಂದು ಕೊಹ್ಲಿ ಅಸಹಾಯಕತೆ ಪ್ರದರ್ಶಿಸಿದ್ದಾರೆ.
‘ನಮ್ಮ ಹುಡುಗರಲ್ಲಿ ಗೆಲುವಿನ ಹಸಿವು ಕಾಣುತ್ತಿಲ್ಲ. ಬೀಸಿ ಹೊಡೆದರೆ ಔಟಾಗುತ್ತೇನೋ ಎಂಬ ಭಯದಲ್ಲಿರುವಂತೆ ಆಡುತ್ತಿದ್ದಾರೆ. ನಾವು ಗೆಲ್ಲುವ ಉದ್ದೇಶದಿಂದ ಆಡಿ ಸೋಲುತ್ತಿಲ್ಲ. ಸುಲಭವಾಗಿ ಸೋಲುತ್ತಿದ್ದೇವೆ’ ಎಂದು ವಿರಾಟ್ ಪಂದ್ಯದ ನಂತರ ನಿರಾಸೆಯಿಂದ ಹೇಳಿದ್ದಾರೆ.
ಹಾಗಿದ್ದರೂ, ಹಿಂದೆ ಅನುಭವಿಸಿದ ಸೋಲನ್ನು ಮರೆಯಿರಿ. ಪ್ಲೇ ಆಪ್ ಮ್ಯಾಚ್ ಗಳ ಬಗ್ಗೆ ಯೋಚನೆ ಮಾಡಿ. ಮುಂದಿನ ಪಂದ್ಯಗಳಲ್ಲಾದರೂ ನಿಮ್ಮ ಸಾಮರ್ಥ್ಯವನ್ನು ಹೊರಗೆಡಹಿ ಎಂದು ಕೊಹ್ಲಿ ಕರೆ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ