Publish Date: Sat, 29 Apr 2017 (10:55 IST)
Updated Date: Sat, 29 Apr 2017 (11:03 IST)
ಕೋಲ್ಕೊತ್ತಾ: ಐಪಿಎಲ್ ಪಂದ್ಯಾವಳಿಯಲ್ಲಿ ಭರ್ಜರಿ ಫಾರ್ಮ್ ಗೆ ಮರಳಿದ ರಾಬಿನ್ ಉತ್ತಪ್ಪ ಪರ ಕೋಲ್ಕೊತ್ತಾ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್ ಬ್ಯಾಟಿಂಗ್ ಮಾಡಿದ್ದಾರೆ.
ಐಪಿಎಲ್ ಪಂದ್ಯಾವಳಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಉತ್ತಪ್ಪ ಕಡೆಗೆ ರಾಷ್ಟ್ರೀಯ ಆಯ್ಕಗಾರರು ಗಮನ ಹರಿಸಬೇಕು ಎಂದು ಗಂಭೀರ್ ಹೇಳಿದ್ದಾರೆ.
ಉತ್ತಪ್ಪ ಐಪಿಎಲ್ ಪಂದ್ಯಾವಳಿಯಲ್ಲಿ ಹಲವು ಬಾರಿ ತಂಡವನ್ನು ಕಾಪಾಡಿದ್ದಾರೆ. ಅವರನ್ನು ಒಬ್ಬ ಬ್ಯಾಟ್ಸ್ ಮನ್ ಆಗಿ ಮಾತ್ರವಲ್ಲ, ವಿಕೆಟ್ ಕೀಪರ್ ಆಗಿಯೂ ಪರಿಗಣಿಸಿ ಎಂದು ಗಂಭೀರ್ ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ.
‘ನಾನು ಒತ್ತಡವಿಲ್ಲದೇ ಆಡುವುದಕ್ಕೆ ಕಾರಣ ಉತ್ತಪ್ಪ. ಅವರು ರಿಸ್ಕ್ ತೆಗೆದುಕೊಂಡು ಆಡುತ್ತಾರೆ. ಅವರ ಆಟವನ್ನು ಆಯ್ಕೆಗಾರರು ಗಮನಿಸುತ್ತಿದ್ದಾರೆ ಎಂದುಕೊಂಡಿದ್ದೇನೆ’ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ