Publish Date: Mon, 22 May 2017 (09:24 IST)
Updated Date: Mon, 22 May 2017 (09:26 IST)
ಪುಣೆ: ಧೋನಿಯ ರಾಂಚಿ ನಿವಾಸದಲ್ಲಿ ಅವರಿದ್ದರೆ, ಅಭಿಮಾನಿಗಳು ಜಮಾಯಿಸುತ್ತಾರೆ. ಹಾಗೇ ಒಂದು ಕಾಲದಲ್ಲಿ ಈತ ಕೂಡಾ ಧೋನಿ ಮನೆ ಮುಂದೆ ಜಮಾಯಿಸುತ್ತಿದ್ದ. ಆದರೆ ಕೊನೆಗೊಂದು ದಿನ ಸಹ ಆಟಗಾರನಾಗಿಬಿಟ್ಟ!
ಇದು ಪುಣೆ ಸೂಪರ್ ಜೈಂಟ್ ತಂಡದ ಯುವ ಪ್ರತಿಭಾವಂತ ಬ್ಯಾಟ್ಸ್ ಮನ್ ರಾಹುಲ್ ತ್ರಿಪಾಠಿ ಕತೆ. ಅವರು ಅಪ್ಪಟ ಧೋನಿ ಅಭಿಮಾನಿಯಾಗಿದ್ದವರು. ಹೀಗಾಗಿ ಅವರ ಮುಖದರ್ಶನವಾಗುತ್ತದೇನೋ ಎಂದು ಮನೆ ಮುಂದೆ ಕಾದು ಕುಳಿತಿರುತ್ತಿದ್ದರಂತೆ. ಆದರೆ ಈ ಆವೃತ್ತಿಯಲ್ಲಿ ಧೋನಿ ಜತೆಗೆ ಐಪಿಎಲ್ ಫೈನಲ್ ಗೆ ತಂಡವನ್ನು ಅರ್ಧಶತಕ ಗಳಿಸಿ ದಡ ಸೇರಿಸಿದ್ದರು.
ರಾಹುಲ್ ಗೆ ಮೊದಲ ಬಾರಿಗೆ ಪುಣೆ ತಂಡದ ನೆಟ್ ಪ್ರಾಕ್ಟೀಸ್ ನಲ್ಲಿ ಜತೆಯಾಗಿದ್ದು ಧೋನಿ! ಮೊದಲು ರಾಹುಲ್ ಗೆ ಅಭ್ಯಾಸ ಮಾಡಲು ಅವಕಾಶ ಕೊಟ್ಟ ಧೋನಿ ಕ್ರೀಸ್ ನ ಇನ್ನೊಂದು ತುದಿಯಲ್ಲಿ ನಿಂತು ಈ ಹುಡುಗನ ಬ್ಯಾಟಿಂಗ್ ನೋಡುತ್ತಿದ್ದರಂತೆ. ಆಗ ನರ್ವಸ್ ಆಗಿದ್ದ ರಾಹುಲ್ ಸರಿಯಾಗಿ ಬಾಲ್ ಎದುರಿಸಲಾಗಲಿಲ್ಲವಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ