Publish Date: Mon, 22 May 2017 (09:20 IST)
Updated Date: Mon, 22 May 2017 (09:22 IST)
ಹೈದರಾಬಾದ್: ಒಂದೆಡೆ ಐಪಿಎಲ್ ಫೈನಲ್ ಗೆ ಹೈದರಾಬಾದ್ ಸಜ್ಜಾಗುತ್ತಿದ್ದರೆ, ಇನ್ನೊಂದೆಡೆ ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಬಿಸಿಸಿಐಯೊಂದಿಗೆ ಮಹತ್ವದ ಸಭೆ ನಡೆಸುತ್ತಿದ್ದರು.
ಟೀಂ ಇಂಡಿಯಾ ಆಟಗಾರರ ಸಂಭಾವನೆ ವಿಚಾರಕ್ಕೆ ಸಂಬಂಧಿಸಿದಂತೆ, ಬಿಸಿಸಿಐ ಆಡಳಿತಾಧಿಕಾರಿಗಳು ಮತ್ತು ಪದಾಧಿಕಾರಿಗಳ ಮುಂದೆ ವಿಚಾರ ವಿನಿಮಯ ಮಾಡಿಕೊಂಡ ಅನಿಲ್ ಕುಂಬ್ಳೆ ಗ್ರೇಡ್ ಎ ಗುತ್ತಿಗೆ ಹೊಂದಿರುವ ಆಟಗಾರರ ಸಂಭಾವನೆಯನ್ನು 150 ಶೇಕಡಾ ಹೆಚ್ಚಿಸುವಂತೆ ಕೇಳಿಕೊಂಡಿದ್ದಾರೆ.
ಪ್ರಸಕ್ತ ಗ್ರೇಡ್ ಎ ಆಟಗಾರರಿಗೆ 2 ಕೋಟಿ ರೂ. ಗ್ರೇಡ್ ಬಿ ಆಟಗಾರರಿಗೆ 1 ಕೋಟಿ ರೂ. ಮತ್ತು ಗ್ರೇಡ್ ಸಿ ಆಟಗಾರರಿಗೆ 50 ಲಕ್ಷ ಸಂಭಾವನೆ ನೀಡಲಾಗುತ್ತಿದೆ. ಇದರಲ್ಲಿ ಗ್ರೇಡ್ ಎ ಆಟಗಾರರ ಸಂಭಾವನೆಯನ್ನು 5 ಕೋಟಿ ರೂ.ಗೆ ಏರಿಕೆ ಮಾಡಬೇಕು ಎಂದು ಕುಂಬ್ಳೆ ಆಗ್ರಹಿಸಿದ್ದಾರೆ.
ಬಿಸಿಸಿಐ ಆಡಳಿತಾಧಿಕಾರಿಗಳ ಮುಖ್ಯಸ್ಥ ವಿನೋದ್ ರಾಯ್ ಕುಂಬ್ಳೆ ಪ್ರಸ್ತುತಪಡಿಸಿದ ವಿಚಾರಗಳನ್ನು ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕುಂಬ್ಳೆ ಅಲ್ಲದೆ, ನಾಯಕ ಕೊಹ್ಲಿ ಜತೆಗೂ ಸ್ಕೈಪ್ ಮೂಲಕ ಬಿಸಿಸಿಐ ಉನ್ನತಾಧಿಕಾರಿಗಳು ಸಮಾಲೋಚನೆ ನಡೆಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ