Publish Date: Sat, 22 Apr 2017 (08:02 IST)
Updated Date: Sat, 22 Apr 2017 (08:05 IST)
ರಾಜ್ ಕೋಟ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ವೇಗದ 39 ರನ್ ಗಳಿಸಿ ತಂಡದ ಗೆಲುವಿಗೆ ಕಾರಣವಾಗಿದ್ದ ಗುಜರಾತ್ ಆಟಗಾರ ಇಶಾನ್ ಕಿಶನ್ ನ್ನು ವಿರಾಟ್ ಕೊಹ್ಲಿ ಅಣಕಿಸಿದ್ದರು.
ಆದರೆ ಇಶಾನ್ ಈ ಇನಿಂಗ್ಸ್ ನಂತರ ಧೋನಿಗೆ ಥ್ಯಾಂಕ್ಸ್ ಎಂದಿದ್ದಾರೆ. ಬೆಂಗಳೂರು ವಿರುದ್ಧ ಆಡುವಾಗ ಸಿಕ್ಸರ್ ಭಾರಿಸಿದಾಗ ಕೊಹ್ಲಿ ಇಶಾನ್ ಮೇಲೆ ಸ್ಲೆಡ್ಜಿಂಗ್ ಅಸ್ತ್ರ ಬಳಸಿ ಕೆಣಕಲು ಯತ್ನಿಸಿದ್ದರು.
ಆದರೆ ಈ ಇನಿಂಗ್ಸ್ ಮುಗಿದ ಮೇಲೆ ಮಾಜಿ ನಾಯಕ ಧೋನಿಗೆ ತಮಗೆ ಪ್ರೇರಣೆ ನೀಡಿದ್ದಕ್ಕೆ ಇಶಾನ್ ಕೃತಜ್ಞತೆ ಸಲ್ಲಿಸಿದ್ದಾರೆ. ಜಾರ್ಖಂಡ್ ಮೂಲದ ಇಶಾನ್, ತಮ್ಮ ಮೇಲೆ ಧೋನಿ ಪ್ರಭಾವವಿದೆ. ನಾನು ಅವರ ಹೆಜ್ಜೆಯಲ್ಲಿ ನಡೆಯಲು ಬಯಸುವುದಾಗಿ ಹೇಳಿಕೊಂಡಿದ್ದಾರೆ. ಮೊನ್ನೆಯ ಆಟವಾಡುವಾಗಲೂ ಧೋನಿಯನ್ನೇ ಮನಸ್ಸಲ್ಲಿಟ್ಟುಕೊಂಡು ಆಡುತ್ತಿದ್ದೆ ಎಂದು ಇಶಾನ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ