Publish Date: Sat, 22 Apr 2017 (07:23 IST)
Updated Date: Sat, 22 Apr 2017 (07:25 IST)
ಬೆಂಗಳೂರು: ಗೌತಮ್ ಗಂಭೀರ್ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ನಾಯಕ. ಅವರು ಯಾವತ್ತೂ ಬೆಂಗಳೂರು ತಂಡದ ಪರ ಆಡಿದವರಲ್ಲ. ಹಾಗಿದ್ದರೂ, ಆರ್ ಸಿಬಿಯ ಒಬ್ಬ ಆಟಗಾರನ ಆಟ ನೋಡುವುದಕ್ಕೆ ಮಧ್ಯರಾತ್ರಿ ಎದ್ದು ಕೂರುತ್ತಾರಂತೆ.
ಮಧ್ಯರಾತ್ರಿ 2 ಗಂಟೆಗೆ ಎದ್ದು ಗಂಭೀರ್ ನೋಡುವ ಆಟ ಕ್ರಿಸ್ ಗೇಲ್ ರದ್ದು. ವೆಸ್ಟ್ ಇಂಡೀಸ್ ನ ದೈತ್ಯ ಆರ್ ಸಿಬಿಯ ಆರಂಭಿಕ ಗೇಲ್ ಭಾರತೀಯರಿಗೆಲ್ಲಾ ಅಚ್ಚು ಮೆಚ್ಚಿನ ಆಟಗಾರನೇ. ಹಾಗೇ ಗಂಭೀರ್ ಕೂಡಾ ಅವರ ಆಟ ನೋಡಲು ಇಷ್ಟಪಡುತ್ತಾರಂತೆ.
‘ಅವರು ಆಡುವಾಗ ಪ್ರೇಕ್ಷಕರು, ಕಾಮೆಂಟೇಟರ್ ಗಳು, ನೇರಪ್ರಸಾರ ಮಾಡುವವರು ನಿಬ್ಬೆರಗಾಗಿ ನೋಡುತ್ತಿರುತ್ತಾರೆ. ನಾವೆಲ್ಲಾ ಸಿಂಗಲ್, ಎರಡು ರನ್ ಬಗ್ಗೆ ಆಲೋಚಿಸುತ್ತಿದ್ದರೆ, ಅವರು ಸಿಕ್ಸರ್ ಬಗ್ಗೆಯೇ ಆಲೋಚನೆ ಮಾಡುತ್ತಾರೆ. ಅವರೊಬ್ಬ ಅದ್ಭುತ ಎಂಟರ್ ಟೈನರ್’ ಎಂದು ಗಂಭೀರ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ