Publish Date: Sat, 22 Apr 2017 (07:14 IST)
Updated Date: Sat, 22 Apr 2017 (07:16 IST)
ಕೋಲ್ಕೊತ್ತಾ: ಗೆಲುವಿನ ನಾಗಾಲೋಟ ಓಡುತ್ತಿದ್ದ ಕೋಲ್ಕೊತ್ತಾಗೆ ಗುಜರಾತ್ ಮೂಗು ದಾರ ಹಾಕುವಲ್ಲಿ ಯಶಸ್ವಿಯಾಗಿದೆ. ನಾಯಕ ಸುರೇಶ್ ರೈನಾ ನೆರವಿನಿಂದ ಗುಜರಾತ್ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ನಾಲ್ಕು ವಿಕೆಟ್ ಗಳ ಗೆಲುವು ದಾಖಲಿಸಿತು.
188 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಗುಜರಾತ್ ಲಯನ್ಸ್ ಉತ್ತಮ ಆರಂಭ ಪಡೆಯಿತು. ಏರಾನ್ ಪಿಂಚ್ 31 ಮತ್ತು ಬ್ರೆಂಡಮ್ ಮೆಕ್ಕಲಮ್ 33 ರನ್ ಗಳಿಸಿದರು. ನಂತರ ಮಳೆ ಸುರಿದು ಪಂದ್ಯ ಕೆಲ ಕಾಲ ಸ್ಥಗಿತಗೊಂಡಿತು.
ಆಗ ಜತೆಯಾದ ನಾಯಕ ಸುರೇಶ್ ರೈನಾ ಕೇವಲ 46 ಬಾಲ್ ಗಳಲ್ಲಿ 84 ರನ್ ಗಳಿಸಿ 10 ಬಾಲ್ ಬಾಕಿಯಿರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕೂ ಮೊದಲು ಬ್ಯಾಟ್ ಮಾಡಿದ ಕೋಲ್ಕೊತ್ತಾ ಪರ ಕನ್ನಡಿಗ ರಾಬಿನ್ ಉತ್ತಪ್ಪ 72 ರನ್ ಹಾಗೂ ಸುನಿಲ್ ನರೈನ್ 17 ಬಾಲ್ ಗಳಲ್ಲಿ 42 ರನ್ ಗಳಿಸಿ ತಂಡಕ್ಕೆ ಉತ್ತಮ ಮೊತ್ತ ಗಳಿಸಿಕೊಟ್ಟರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ