Publish Date: Fri, 21 Apr 2017 (10:58 IST)
Updated Date: Fri, 21 Apr 2017 (11:00 IST)
ಮುಂಬೈ: ಸಚಿನ್ ತೆಂಡುಲ್ಕರ್ ಮತ್ತು ಧೋನಿ ಇಬ್ಬರೂ ಸಮಾನರೇ. ಧೋನಿಗೆ ನೀಡದ ರಿಯಾಯಿತಿ ಸಚಿನ್ ಗೂ ನೀಡಲಾಗಲ್ಲ ಎಂದು ಬಿಸಿಸಿಐ ಸ್ಪಷ್ಟವಾಗಿ ಹೇಳಿದೆ.
ಅಷ್ಟಕ್ಕೂ ಬಿಸಿಸಿಐ ಈ ಮಾತು ಹೇಳಿರುವುದು, ಜೀವನಾಧಾರಿತ ಸಿನಿಮಾದ ಬಗ್ಗೆ. ಧೋನಿ ಸಿನಿಮಾ ಮಾಡುವಾಗ ನಿರ್ಮಾಪಕ ಅರುಣ್ ಪಾಂಡೆ, ಧೋನಿಯ ವಿಶೇಷ ಆಟಗಳ ವಿಡಿಯೋ ತುಣುಕುಗಳನ್ನು ಬಿಸಿಸಿಐಗೆ ದುಡ್ಡು ಕೊಟ್ಟು ಖರೀದಿಸಿದ್ದರು.
ಇದೀಗ ಸಚಿನ್ ತೆಂಡುಲ್ಕರ್ ಜೀವನಾಧಾರಿತ ಸಿನಿಮಾವೊಂದು ತೆರೆಗೆ ಬರಲಿದ್ದು, ಇದಕ್ಕಾಗಿ ಏಕದಿನ ಪಂದ್ಯದಲ್ಲಿ ಅವರು ಹೊಡೆದ ದ್ವಿಶತಕದ ಇನಿಂಗ್ಸ್ ನ ಕ್ಲಿಪ್ಪಿಂಗ್ ನ್ನು ರಿಯಾಯಿತಿ ದರದಲ್ಲಿ ನೀಡುವಂತೆ ಚಿತ್ರತಂಡ ಕೇಳಿಕೊಂಡಿತ್ತು.
ಇದಕ್ಕೆ ಬಿಸಿಸಿಐ ಮೇಲಿನಂತೆ ಪ್ರತಿಕ್ರಿಯಿಸಿದೆ. ಧೋನಿ ಚಿತ್ರದ ನಿರ್ಮಾಪಕರು ಮಾಡಿದಂತೆ ನೀವೂ ದುಡ್ಡು ತೆತ್ತು ಖರೀದಿ ಮಾಡಿ ಎಂದು ಸೂಚಿಸಿದೆ. ಯಾವುದೇ ಆಟಗಾರನ ಕ್ಲಿಪ್ಪಿಂಗ್ ನ್ನು ವ್ಯವಹಾರಿಕ ಉದ್ದೇಶಕ್ಕಾಗಿ ಬಳಸುವುದಿದ್ದರೆ, ಬಿಸಿಸಿಐ ಒಪ್ಪಿಗೆ ಬೇಕು ಎಂಬ ನಿಯಮವಿದೆ. ಅದನ್ನು ಸಚಿನ್ ಗಾಗಿ ಮುರಿಯಲಾಗದು ಎಂಬುದು ಬಿಸಿಸಿಐ ನಿಲುವು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ