Publish Date: Fri, 21 Apr 2017 (10:39 IST)
Updated Date: Fri, 21 Apr 2017 (10:41 IST)
ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮವಾಗಿ ಆಡಿದ್ದ ಕನ್ನಡಿಗ ಕೆಎಲ್ ರಾಹುಲ್ ಭುಜದ ಗಾಯದಿಂದಾಗಿ ಐಪಿಎಲ್ ಕೂಟ ತಪ್ಪಿಸಿಕೊಂಡಿದ್ದರು. ಇದೀಗ ಅಭಿಮಾನಿಗಳಿಗೆ ಇನ್ನೊಂದು ಶಾಕ್ ನೀಡಿದ್ದಾರೆ.
ಜೂನ್ ನಲ್ಲಿ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೂ ಅವರು ಅಲಭ್ಯರಾಗಲಿದ್ದಾರೆ. ಶಸ್ತ್ರಚಿಕಿತ್ಸೆಗೊಳಗಾಗಿರುವ ರಾಹುಲ್ ತಾವು ಚಾಂಪಿಯನ್ಸ್ ಟ್ರೋಫಿಗಾಗುವಾಗ ಫಿಟ್ ಆಗುವುದು ಅನುಮಾನ ಎಂದಿದ್ದಾರೆ.
ಇದರಿಂದಾಗಿ ಉತ್ತಮ ಫಾರ್ಮ್ ನಲ್ಲಿರುವ ರಾಹುಲ್ ಸೇವೆಯಿಂದ ಟೀಂ ಇಂಡಿಯಾ ವಂಚಿತವಾಗಲಿದೆ. ರೋಹಿತ್ ಶರ್ಮಾ ಚೇತರಿಸಿಕೊಂಡಿರುವುದರಿಂದ ಇನ್ನಾದರೂ ಭಾರತಕ್ಕೆ ಆರಂಭಿಕರ ಸಮಸ್ಯೆ ಕಾಡದು ಎಂದು ಲೆಕ್ಕಾಚಾರ ಹಾಕಿದ್ದ ತಂಡಕ್ಕೆ ಇದು ನಿಜಕ್ಕೂ ಶಾಕಿಂಗ್ ನ್ಯೂಸ್.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ