Select Your Language

Notifications

webdunia
webdunia
webdunia
webdunia

ಕೊಹ್ಲಿ, ಡಿವಿಲಿಯರ್ಸ್ ಇಲ್ಲದಿದ್ದರೂ ಗೆದ್ದು ತೋರಿಸಿದ ಆರ್`ಸಿಬಿ

ಕೊಹ್ಲಿ, ಡಿವಿಲಿಯರ್ಸ್ ಇಲ್ಲದಿದ್ದರೂ ಗೆದ್ದು ತೋರಿಸಿದ ಆರ್`ಸಿಬಿ
ಬೆಂಗಳೂರು , ಶನಿವಾರ, 8 ಏಪ್ರಿಲ್ 2017 (23:48 IST)
ವಿರಾಟ್ ಕೊಹ್ಲಿ, ಡಿವಿಲಿಯರ್ಸ್ ಇಲ್ಲದಿದ್ದರೂ ಬೆಂಗಳೂರಿನಲ್ಲಿ ನಡೆದ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಆರ್`ಸಿಬಿ 15 ರನ್`ಗಳ ಭರ್ಜರಿ ಜಯ ದಾಖಲಿಸಿದೆ. ಆರ್`ಸಿಬಿ ನೀಡಿದ 158 ರನ್`ಗಳ ಸಾಧಾರಣ ಗುರಿ ಬೆನ್ನತ್ತಿದ ಡೆಲ್ಲಿ 20 ಓವರ್`ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 142 ರನ್ ಗಳಿಸಲಷ್ಟೇ ಶಕ್ತವಾಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆರ್`ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ಈ ಪಂದ್ಯದಲ್ಲೂ ಕೈಕೊಟ್ಟ ಕ್ರಿಸ್ ಗೇಲ್ 6 ರನ್`ಗೆ ನಿರ್ಗಮಿಸಿದರು. ವ್ಯಾಟ್ಸನ್,  ಮಂದೀಪ್ ಯಾರೊಬ್ಬರೂ ಕ್ರೀಸ್`ನಲ್ಲಿ ನಿಲ್ಲಲಿಲ್ಲ. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಹೆಬ್ಬಂಡೆಯಂತೆ ನಿಂತ ಕೇದಾರ್ ಜಾಧವ್ 5 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 69 ರನ್ ಗಳಿಸಿದರು. ಡೆಲ್ಲಿ ಬೌಲರ್`ಗಳ ಬೆವರಿಳಿಸಿದ ಜಾಧವ್ ಅದ್ಬುತ  ಆಟ ಆಡಿದರು. ಜಾಧವ್ ಆಡುತ್ತಿದ್ದಾಗ ಆರ್`ಸಿಬಿ 180 ರನ್ ಗಡಿ ದಾಟುವ ಸೂಚನೆ ಸಿಕ್ಕಿತ್ತು. ಜಾಧವ್ ಔಟಾದ ಬಳಿಕ ಕೊನೆಯ 3 ಓವರ್ ರನ್ ಬರಲಿಲ್ಲ. 157 ರನ್`ಗಳಿಗೆ ಆರ್ಸಿಬಿ ಬ್ಯಾಟಿಂಗ್ ಮುಗಿಸಿತು.

ಸಾಧಾರಣ ಮೊತ್ತ ಬೆನ್ನತ್ತಿದ ಡೆಲ್ಲಿ ಸ್ಲೋ ಪಿಚ್`ನಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿತು. ಆದರೆ, ನಿಯಮಿತವಾಗಿ ಬಿದ್ದ ವಿಕೆಟ್ ಡೆಲ್ಲಿಗೆ ದುಬಾರಿಯಾಯ್ತು. ಇತ್ತ, ವಿಕೆಟ್ ಉರುಳುತ್ತಿದ್ದರೂ ಏಕಾಂಗಿ ಹೋರಾಟ ನಡೆಸಿದ ರಿಶಬ್ ಪಂತ್ ಅರ್ಧಶತಕ ಸಿಡಿಸಿದರು. ಕೊನೆಯ ಓವರಿನಲ್ಲಿ ಡೆಲ್ಲಿ ಗೆಲುವಿಗೆ 19 ರನ್ ಬೇಕಿತ್ತು. ಪಂದ್ಯದಲ್ಲಿ ಮೊದಲ ಬಾರಿಗೆ ಬಾಲ್ ಪಡೆದ ಪವನ್ ನೇಗಿ ಮೊದಲ ಎಸೆತದಲ್ಲೇ ರಿಶಬ್ ವಿಕೆಟ್ ಉರುಳಿಸಿದರು. 3 ರನ್ ನೀಡಿ ರಿಶಬ್ ಪಂತ್ ಸೇರಿ 2 ವಿಕೆಟ್ ಉರುಳಿಸುವ ಮೂಲಕ ಆರ್ಸಿಬಿಗೆ ಜಯ ತಂದುಕೊಟ್ಟರು.  

ಈ ಮೂಲಕ ವಿರಾಟ್ ಕೊಹ್ಲಿ, ಎಬಿಡಿ ಇಲ್ಲದಿದ್ದರು ಆರ್ಸಿಬಿ ಗೆದ್ದು ತೋರಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಮ್ಯಾಕ್ಸ್`ವೆಲ್ ಹೊಡೆತಕ್ಕೆ ಮಕಾಡೆ ಮಲಗಿದ ಪುಣೆ: ಪಂಜಾಬ್`ಗೆ 6 ವಿಕೆಟ್`ಗಳ ಭರ್ಜರಿ ಜಯ