Select Your Language

Notifications

webdunia
webdunia
webdunia
webdunia

ಪಂಜಾಬ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಪ್ಲೇಆಫ್ಸ್`ಗೆ ಎಂಟ್ರಿಕೊಟ್ಟ ಪುಣೆ

ಪಂಜಾಬ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಪ್ಲೇಆಫ್ಸ್`ಗೆ ಎಂಟ್ರಿಕೊಟ್ಟ ಪುಣೆ
ಪುಣೆ , ಭಾನುವಾರ, 14 ಮೇ 2017 (21:50 IST)
ಕಳೆದ ವರ್ಷ ಕಳಪೆ ಪ್ರದರ್ಶನ ನೀಡಿದ್ದ ರೈಸಿಂಗ್ ಪುಣೆ ಸೂಪರ್ ಜಾಯಿಂಟ್ ತಂಡ ಈ ವರ್ಷ ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ಪುಣೆ ಪ್ಲೇಆಫ್ಸ್`ಗೆ ಎಂಟ್ರಿಕೊಟ್ಟಿದೆ.

ಇಂದು ನಡೆದ ನಿರ್ಣಾಯಕ ಪಂದ್ಯದಲ್ಲಿ ಪಂಜಾಬ್ ವಿರುದ್ಧ 9 ವಿಕೆಟ್`ಗಳ ಗೆಲುವು ಸಾಧಿಸಿದ ಪುಣೆ ತಂಡ ಅಂಕ ಪಟ್ಟಿಯಲ್ಲಿ ಎರಡನೇ ತಂಡವಾಗಿ
ಪ್ಲೇಆಫ್ಸ್`ಗೆ ಎಂಟ್ರಿ ಪಡೆಯಿತು. ಪುಣೆಯ ಬೌಲಿಂಗ್ ದಾಳಿ ಎದುರು ಯಾವೊಬ್ಬ ಪಂಜಾಬ್ ಬ್ಯಾಟ್ಸ್`ಮನ್ ನಿಲ್ಲಲು ಸಾಧ್ಯವಾಗಲಿಲ್ಲ. ನಿಯಮಿತವಾಗಿ ವಿಕೆಟ್ ಕಳೆದುಕೊಂಡು 15.5 ಓವರ್`ಗಳಲ್ಲಿ 73 ರನ್`ಗಳಿಗೆ ಆಲೌಟ್ ಆಯಿತು.
ಸಾಧಾರಣ ಗುರಿ ಬೆನ್ನತ್ತಿದ ಪುಣೆ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿತು. ರಹಾನೆ 34, ತ್ರಿಪಾಠಿ 28 ಮತ್ತು ಸ್ಮಿತ್ 15 ರನ್ ಸಿಡಿಸಿ ತಂಡವನ್ನ ದಡ ಸೇರಿಸಿದರು.  

ಈ ಗೆಲುವಿನೊಂದಿಗೆ ಪುಣೆ ತಂಡ ಪ್ಲೇಆಪ್ಸ್`ಗೆ ಎಂಟ್ರಿಕೊಟ್ಟಿದ್ದು, ಮೇ 16ರಂದು ಮುಂಬೈನಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಸೆಣೆಸಲಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲ ತಾಯಂದಿರಿಗೆ ವಿಶಿಷ್ಟವಾಗಿ ಮದರ್ಸ್ ಡೇ ಶುಭಾಶಯ ಕೋರಿದ ಕೊಹ್ಲಿ