Select Your Language

Notifications

webdunia
webdunia
webdunia
webdunia

ಪುಣೆ-ಮುಂಬೈ ಐಪಿಎಲ್ ಫೈನಲ್ ಗೆ ರೆಡಿ! ಯಾರಿಗೆ ನಿಮ್ಮ ಬೆಂಬಲ?

ಪುಣೆ-ಮುಂಬೈ ಐಪಿಎಲ್ ಫೈನಲ್ ಗೆ ರೆಡಿ! ಯಾರಿಗೆ ನಿಮ್ಮ ಬೆಂಬಲ?
Hyderabad , ಭಾನುವಾರ, 21 ಮೇ 2017 (04:32 IST)
ಹೈದರಾಬಾದ್: ಕೊನೆಗೂ ಇಷ್ಟು ದಿನ ನಡೆದ ಐಪಿಎಲ್ ಜಾತ್ರೆಗೆ ಇಂದು ತೆರೆ ಬೀಳಲಿದೆ. ಹೈದರಾಬಾದ್ ನ ಮೈದಾನದಲ್ಲಿ ಇಂದು ಪುಣೆ ಸೂಪರ್ ಜೈಂಟ್  ಮತ್ತು ಮುಂಬೈ ಇಂಡಿಯನ್ಸ್ ನಡುವೆ ಜಿದ್ದಾ ಜಿದ್ದಿನ ಹೋರಾಟ ನಡೆಯುವ ನಿರೀಕ್ಷೆಯಿದೆ.

 
ಭಾನುವಾರ ಪ್ರೇಕ್ಷಕರಿಗೆ ಫುಲ್ ಮಜಾ ಕೊಡುವುದರಲ್ಲಂತೂ ಅನುಮಾನವಿಲ್ಲ. ಎರಡೂ ತಂಡಗಳು ಸಮಬಲರೇ. ಅದರಲ್ಲೂ ಪುಣೆ ಮುಂಬೈ ಇಂಡಿಯನ್ಸ್ ತಂಡವನ್ನು ಈ ಆವೃತ್ತಿಯಲ್ಲಿ ಮೂರು ಬಾರಿ ಸೋಲಿಸಿ ಮೇಲುಗೈ ಸಾಧಿಸಿದೆ.

ಈ ಮೂರೂ ಸೋಲುಗಳಿಗೆ ಸೇಡು ತೀರಿಸಿಕೊಳ್ಳಲು ರೋಹಿತ್ ಶರ್ಮಾ ನೇತೃತ್ವದ ಮುಂಬೈಗೆ ಸದವಕಾಶ ಸಿಕ್ಕಿದೆ. ಪುಣೆ ತಂಡವನ್ನು ನೋಡುವುದಾದರೆ, ಹೆಸರಿಗೆ ನಾಯಕ ಸ್ಟೀವ್ ಸ್ಮಿತ್ ಆಗಿದ್ದರೂ, ಎಲ್ಲರೂ ಧೋನಿಯ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಏಳನೇ ಐಪಿಎಲ್ ಫೈನಲ್ ಆಡುತ್ತಿರುವ ಧೋನಿ ಕೂಡಾ ಅದ್ಭುತ ಫಾರ್ಮ್ ನಲ್ಲಿದ್ದು, ಈ ಆವೃತ್ತಿಯಲ್ಲಿ ನಿರ್ಣಾಯಕ ಘಟ್ಟದಲ್ಲಿ ತಂಡಕ್ಕೆ ಆಸರೆಯಾಗಿದ್ದಾರೆ.

ಅತ್ತ ಮುಂಬೈಗೆ ಪಾಂಡ್ಯ ಸಹೋದರರ ಮೇಲೆ ಅಪಾರ ಭರವಸೆಯಿದೆ. ಅವರಲ್ಲದೆ, ಪಾರ್ಥಿವ್ ಪಟೇಲ್ ತಂಡದ ಪರ ಗರಿಷ್ಠ ರನ್ ಗಳಿಸಿ ಫಾರ್ಮ್ ನಲ್ಲಿದ್ದಾರೆ. ಹಾಗಿದ್ದರೂ ರೋಹಿತ್ ಶರ್ಮಾ ಪರದಾಡುವುದನ್ನು ಬಿಟ್ಟರೆ ಮಧ್ಯಮ ಕ್ರಮಾಂಕವೂ ಬಲಾಢ್ಯವಾಗಬಹುದು.

ಎರಡು ತಂಡಗಳ ಪೈಕಿ ಯಾರೇ ಗೆದ್ದರೂ ವಿಶೇಷವಾಗಲಿದೆ. ಪುಣೆ ಗೆದ್ದರೆ ಅದಕ್ಕಿದು ಚೊಚ್ಚಲ ಐಪಿಎಲ್ ಕಿರೀಟ, ಮುಂಬೈ ಗೆದ್ದರೆ ಹ್ಯಾಟ್ರಿಕ್ ಗೆಲುವಾಗಲಿದೆ. ಯಾರು ಗೆಲ್ಲುತ್ತಾರೋ ನೋಡೋಣ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಮ್ಮೆ ಧೋನಿ ತೆಗಳಿ, ಸ್ಟೀವ್ ಸ್ಮಿತ್ ಹೊಗಳಿದ ಪುಣೆ ಮಾಲಿಕ