Publish Date: Sat, 20 May 2017 (08:48 IST)
Updated Date: Sat, 20 May 2017 (08:50 IST)
ಪುಣೆ: ಧೋನಿ ಎಷ್ಟೇ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿದರೂ, ಅವರ ಮೇಲೆ ಪುಣೆ ಸೂಪರ್ ಜೈಂಟ್ ಮಾಲಿಕ ಸಂಜೀವ್ ಗೊಯೆಂಕಾ ಮನಸ್ಸು ಕರಗುತ್ತಿಲ್ಲ. ಇದೀಗ ಮತ್ತೊಮ್ಮೆ ಧೋನಿಯನ್ನು ತೆಗಳಿ ಸ್ಟೀವ್ ಸ್ಮಿತ್ ರನ್ನು ಹೊಗಳಿ ವಿವಾದಕ್ಕೀಡಾಗಿದ್ದಾರೆ.
ಧೋನಿ ಪಂದ್ಯ ಗೆಲ್ಲಿಸಿಕೊಟ್ಟರೂ ಗೊಯೆಂಕಾ ಟೀಂ ಇಂಡಿಯಾದ ಮಾಜಿ ನಾಯಕನ ಮೇಲೆ ಈ ರೀತಿ ವಿಷ ಕಾರುತ್ತಿರುವುದು ಧೋನಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಆಯ್ಕೆಯ ನಾಯಕ ಸ್ಟೀವ್ ಸ್ಮಿತ್ ರನ್ನು ಹೊಗಳುವ ಭರದಲ್ಲಿ ಗೊಯೆಂಕಾ ಸ್ಮಿತ್ ಧೋನಿಯನ್ನು ಕಡೆಗಣಿಸಿದ್ದಾರೆ.
‘ಧೋನಿ ವಿಶ್ವದ ಅದ್ಭುತ ಆಟಗಾರ, ವಿಕೆಟ್ ಕೀಪರ್ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅವರ ಮನಸ್ಸಿಗಿಂತಲೂ ವೇಗವಾಗಿ ಸ್ಟೀವ್ ಸ್ಮಿತ್ ರ ಮೆದುಳು ಚುರುಕಾರಿ ಕೆಲಸ ಮಾಡುತ್ತದೆ. ಸ್ಮಿತ್ ಗೆ ನನ್ನ ಒಂದೇ ಒಂದು ಮನವಿ ಎಂದರೆ, ಚಾಂಪಿಯನ್ ಶಿಪ್ ಗೆಲ್ಲಿ’ ಎಂದು ಸಂಜೀವ್ ಗೊಯೆಂಕಾ ಟ್ವೀಟ್ ಮಾಡಿದ್ದಾರೆ.
ಸಂಜೀವ್ ತಮ್ಮ ಅಭಿಪ್ರಾಯ ಹೇಳಿದ್ದಿರಬಹುದು. ಆದರೆ ಈ ಹಿಂದೆ ಧೋನಿ ಬಗ್ಗೆ ಸಹೋದರ ಹರ್ಷ ಗೊಯೆಂಕಾ ವಿವಾದಾತ್ಮಕ ಟ್ವೀಟ್ ಮಾಡಿದ್ದರಿಂದ ಸಂಜೀವ್ ನೀಡಿರುವ ಈ ಹೇಳಿಕೆ ಈಗ ಮತ್ತೊಮ್ಮೆ ಧೋನಿ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗುವುದಂತೂ ಖಂಡಿತಾ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ