ಕೋಲ್ಕೊತ್ತಾ: ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕೊತ್ತಾ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ 8 ವಿಕೆಟ್ ಗಳಿಂದ ಸೋಲೊಪ್ಪಿದೆ. ಇದರೊಂದಿಗೆ ಟೂರ್ನಿಯಲ್ಲಿ ಸತತ ಎರಡನೇ ಸೋಲು ಕಂಡಂತಾಗಿದೆ.
ಗೆಲುವಿಗೆ 171 ರನ್ ಗಳ ಗುರಿ ಬೆನ್ನಟ್ಟಿದ ಕೋಲ್ಕೊತ್ತಾ ಪರ ನಾಯಕನ ಆಟವಾಡಿದ ಗೌತಮ್ ಗಂಭೀರ್ 49 ಬಾಲ್ ಗಳಲ್ಲಿ 72 ರನ್ ಚಚ್ಚಿದರು. ಕನ್ನಡಿಗ ರಾಬಿನ್ ಉತ್ತಪ್ಪ 26 ರನ್ ಗಳಿಸಿದರು. ಮನೀಶ್ ಪಾಂಡೆ 6 ರನ್ ಗಳಿಸಿ ಅಜೇಯರಾಗುಳಿದರು.
ಕೋಲ್ಕೊತ್ತಾ ತಂಡಕ್ಕೆ ಮರಳಿದ ವೇಗಿ ಉಮೇಶ್ ಯಾದವ್ ಎದುರಾಳಿಗಳ ನಾಲ್ಕು ವಿಕೆಟ್ ಕಿತ್ತರು. ಪಂದ್ಯದ ಆರಂಭಕ್ಕೂ ಮೊದಲು ಮೈದಾನದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನೃತ್ಯ ಕಳೆಗಟ್ಟಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ