Select Your Language

Notifications

webdunia
webdunia
webdunia
webdunia

8 ಹೋಮ್ ಗ್ರೌಂಡ್`ಗಳಲ್ಲಿ ಪ್ರತ್ಯೇಕವಾಗಿ ಐಪಿಎಲ್ ಉದ್ಘಾಟನೆ

8 ಹೋಮ್ ಗ್ರೌಂಡ್`ಗಳಲ್ಲಿ ಪ್ರತ್ಯೇಕವಾಗಿ ಐಪಿಎಲ್ ಉದ್ಘಾಟನೆ
ಬೆಂಗಳೂರು , ಸೋಮವಾರ, 3 ಏಪ್ರಿಲ್ 2017 (14:32 IST)
ಕ್ರಿಕೆಟ್`ನ ಮಹಾಸಂಗ್ರಾಮ ಐಪಿಎಲ್ ಟೂರ್ನಿ 10ನೇ ಆವೃತ್ತಿ ಬುಧವಾರದಿಂದ ಆರಂಭವಾಗುತ್ತಿದ್ದು, 8 ಕಡೆ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿವೆ. 8 ಫ್ರಾಂಚೈಸಿಗಳೂ ತಮ್ಮ 8 ಹೋಮ್ ಗ್ರೌಂಡ್`ಗಳಲ್ಲಿ ಉದ್ಘಾಟನಾಕಾರ್ಯಕ್ರಮ ನಡೆಸಲಿವೆ ಎಂದು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

ಆಡಳಿತ ಮಂಡಳಿ ಅವಿರೋಧವಾಗಿ ಈ ನಿರ್ಧಾರ ಕೈಗೊಂಡಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಆ ನೆಲದ ಸೊಗಡಿನ ವಿಶಿಷ್ಟ ಅನುಭವ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

`ಇದು ನನ್ನ ನಿರ್ಧಾರವೆಂದು ಹೇಳಿದರೆ ಅದು ಸರಿಯಲ್ಲ. ಎಲ್ಲ ಸದಸ್ಯರು ತಮ್ಮ ಹೋಮ್ ಗ್ರೌಂಡ್`ಗಳಲ್ಲಿ ಪ್ರತ್ಯೇಕ ಉದ್ಘಾಟನಾ ಸಮಾರಂಭ ಏರ್ಪಡಿಸಲು ನಿರ್ಧರಿಸಿದ್ದು, ಸ್ಥಳೀಯ ಅಭಿಮಾನಿಗಳು ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗುವ ಅವಕಾಶ ಕಲ್ಪಿಸಲಾಗಿದೆ’ ಎಂದು ಶುಕ್ಲಾ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಭಾರತ ತಂಡ ಆಡುವುದನ್ನು ನೋಡುತ್ತಿದ್ದರೆ ಹತಾಶೆಯಾಗುತ್ತಿತ್ತು’