Publish Date: Sat, 22 Apr 2017 (10:26 IST)
Updated Date: Sat, 22 Apr 2017 (10:28 IST)
ಹೈದರಾಬಾದ್: ಈ ಆವೃತ್ತಿಯ ಐಪಿಎಲ್ ಪಂದ್ಯಾವಳಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಆದರೆ ಮಧ್ಯದಲ್ಲೇ ಅದು ಪ್ರಮುಖ ಆಟಗಾರರೊಬ್ಬರನ್ನು ಕಳೆದುಕೊಳ್ಳಲಿದೆ.
ಐಪಿಎಲ್ ಮುಗಿದ ತಕ್ಷಣ ಎಲ್ಲಾ ದೇಶದ ಆಟಗಾರರು ಇನ್ನೊಂದು ಪ್ರತಿಷ್ಠಿತ ಟೂರ್ನಿಗೆ ರೆಡಿ ಆಗಬೇಕಿದೆ. ಅದು ಇಂಗ್ಲೆಂಡ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್. ಹೀಗಾಗಿ ತಮ್ಮ ದೇಶದ ಪರ ಆಡಲು ಬಾಂಗ್ಲಾದೇಶ ಕ್ರಿಕೆಟಿಗ ಮುಸ್ತಾಫಿಝುರ್ ಹೈದರಾಬಾದ್ ತಂಡವನ್ನು ಏಪ್ರಿಲ್ 25 ಕ್ಕೆ ತೊರೆಯಲಿದ್ದಾರೆ ಎಂಬ ಸುದ್ದಿ ಬಂದಿದೆ.
ಬಾಂಗ್ಲಾದೇಶ ತಂಡ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಾಗಿ ಸಿದ್ಧತಾ ಶಿಬಿರ ನಡೆಸುತ್ತಿದ್ದು, ಇದರಲ್ಲಿ ಪಾಲ್ಗೊಳ್ಳಲು ಶ್ರೀಮಂತ ಕ್ರಿಕೆಟ್ ಲೀಗ್ ಗೆ ಮುಸ್ತಾಫಿಝುರ್ ಗುಡ್ ಬೈ ಹೇಳುವ ಸಾಧ್ಯತೆಯಿದೆ ಎಂದು ತಂಡದ ಮೂಲಗಳು ಹೇಳಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ