ಮುಂಬೈ: ಪುಣೆ ಸೂಪರ್ ಜೈಂಟ್ ಮತ್ತು ಗುಜರಾತ್ ಲಯನ್ಸ್ ಭವಿಷ್ಯ ಈ ಆವೃತ್ತಿಗೆ ಕೊನೆಗೊಳ್ಳಲಿದೆ. ಈ ಎರಡೂ ತಂಡಗಳ ಎರಡು ವರ್ಷದ ಒಪ್ಪಂದ ಕೊನೆಗೊಂಡಿದೆ ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.
ಇದರಿಂದ ಧೋನಿ, ಸುರೇಶ್ ರೈನಾರಂತಹ ಟೀಂ ಇಂಡಿಯಾದ ಆಟಗಾರರು ಮುಂದಿನ ಆವೃತ್ತಿಯಲ್ಲಿ ಹೊಸ ತಂಡದೊದಿಗೆ ಕಾಣಿಸಿಕೊಳ್ಳಲಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿ ಐಪಿಎಲ್ ನಿಂದ ಎರಡು ವರ್ಷ ನಿಷೇಧಕ್ಕೊಳಗಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಮುಂದಿನ ವರ್ಷಕ್ಕೆ ಕಣಕ್ಕಿಳಿಯಲಿದೆ.
ಒಂದು ವೇಳೆ ಪುಣೆ ಮತ್ತು ಗುಜರಾತ್ ತಮ್ಮ ಒಪ್ಪಂದ ಮುಂದುವರಿಸಲು ಬಯಸಿದರೆ, ಹೊಸದಾಗಿ ಬಿಡ್ಡಿಂಗ್ ನಲ್ಲಿ ಪಾಲ್ಗೊಳ್ಳಬೇಕು. ಹಾಗಾಗಿ ತಂಡದ ಮಾಲಿಕರು ಮುಂದಿನ ಐಪಿಎಲ್ ನಲ್ಲೂ ಭಾಗವಹಿಸಬೇಕೆಂದು ಬಯಸಿದರೆ ಹೊಸದಾಗಿ ಬಿಡ್ಡಿಂಗ್ ಮಾಡಿ, ಆಟಗಾರನ್ನು ಖರೀದಿ ಮಾಡಬೇಕು ಎಂದು ಶುಕ್ಲಾ ಹೇಳಿದ್ದಾರೆ.
ಐಪಿಎಲ್ ನಲ್ಲಿ ತಂಡಗಳ ಸಂಖ್ಯೆ ಜಾಸ್ತಿಯಾದಂತೆ ಪಂದ್ಯಗಳ ಸಂಖ್ಯೆಯೂ ಹೆಚ್ಚಿಸಬೇಕಾಗುತ್ತದೆ. ಇದರಿಂದ ಟೂರ್ನಿ ನಡೆಸಲು ಇನ್ನೂ ಹೆಚ್ಚಿನ ದಿನ ಬೇಕಾಗುತ್ತದೆ. ಅದು ಅಂತಾರಾಷ್ಟ್ರೀಯ ಕ್ರಿಕೆಟ್ ನ ಬ್ಯುಸಿ ಶೆಡ್ಯೂಲ್ ನಲ್ಲಿ ಸುಲಭವಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ