ಬೆಂಗಳೂರು: ನಿನ್ನೆ ಕೋಲ್ಕೊತ್ತಾ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲೂ ಆರ್ ಸಿಬಿ ಸೋಲನುಭವಿಸಿದೆ. ಆದರೆ ಈ ಪಂದ್ಯದಲ್ಲಿ ನಾಯಕ ಕೊಹ್ಲಿ ಸಿಟ್ಟು ನೋಡಿ ಮೈದಾನದಲ್ಲಿದ್ದವರೆಲ್ಲಾ ಅವಾಕ್ಕಾದರು.
158 ರನ್ ಗಳ ಗುರಿ ನೀಡಿದ ಆರ್ ಸಿಬಿ ಸುನಿಲ್ ನರೈನ್ ಮತ್ತು ಕ್ರಿಸ್ ಲಿನ್ ಪ್ರಚಂಡ ಬ್ಯಾಟಿಂಗ್ ನಿಂದ ಬಸವಳಿದಿತ್ತು. ಮೊದಲೇ ಸೋಲಿನ ಹತಾಶೆ. ಅದರ ನಡುವೆ ಅಂಪಾಯರ್ ಕೂಡಾ ಔಟಾಗಿದ್ದರೂ ನಾಟೌಟ್ ಎಂದರೆ ಸಿಟ್ಟು ಬರದೇ ಇದ್ದೀತೇ? ಅದುವೇ ಕೊಹ್ಲಿಗೂ ಆಗಿದ್ದು.
ಇದು ನಡೆದಿದ್ದು 15 ನೇ ಓವರ್ ನಲ್ಲಿ.ಆಗ ಯೂಸುಫ್ ಪಠಾಣ್ ಬ್ಯಾಟಿಂಗ್ ಮಾಡುತ್ತಿದ್ದರು. ಬಾಲ್ ಅವರ ಬ್ಯಾಟ್ ಸವರಿಕೊಂಡು ಕೀಪರ್ ಕೈ ಸೇರಿತ್ತು. ಆದರೆ ಅಂಪಾಯರ್ ನಾಟೌಟ್ ಎಂದಿದ್ದು ಕೊಹ್ಲಿಯನ್ನು ರೊಚ್ಚಿಗೆಬ್ಬಿಸಿತ್ತು.
ಹೂಂಕರಿಸುತ್ತಾ ಅಬ್ಬರಿಸಿದ ಕೊಹ್ಲಿಯ ಹೊಸ ಅವತಾರ ನೋಡಿ ಮೈದಾನದಲ್ಲಿದ್ದವರೆಲ್ಲರೂ ಅವಕ್ಕಾಗಿ ನೋಡುತ್ತಿದ್ದರು. ಆರ್ ಸಿಬಿ ಆಟಗಾರರು ಕೊಹ್ಲಿ ಜತೆ ಮನವಿ ಮಾಡಿದರು. ಕೊಹ್ಲಿ ವರ್ತನೆ ನಿನ್ನೆ ನಿಜಕ್ಕೂ ಹುಬ್ಬೇರಿಸುವಂತಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ