Publish Date: Sat, 20 May 2017 (07:04 IST)
Updated Date: Sat, 20 May 2017 (07:07 IST)
ಬೆಂಗಳೂರು: ಮತ್ತೊಂದು ಐಪಿಎಲ್ ಗೆಲ್ಲುವ ಕನಸಿನಲ್ಲಿದ್ದ ಕೋಲ್ಕೊತ್ತಾ ನೈಟ್ ರೈಡರ್ಸ್ ಗೆ ಮುಂಬೈ ಇಂಡಿಯನ್ಸ್ ತಣ್ಣೀರೆರಚಿದೆ. ನಿನ್ನೆ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಕೆಕೆಆರ್ ವಿರುದ್ಧ 6 ವಿಕೆಟ್ ಗೆಲುವು ಕಂಡಿದೆ.
ಇದರೊಂದಿಗೆ ಚೊಚ್ಚಲ ಐಪಿಎಲ್ ಗೆಲ್ಲುವ ಕನಸಿನಲ್ಲಿರುವ ಪುಣೆ ಸೂಪರ್ ಜೈಂಟ್ ಮತ್ತು ಎರಡು ಬಾರಿಯ ಚಾಂಪಿಯನ್ ಮುಂಬೈ ಫೈನಲ್ ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
ಇದುವರೆಗೆ ಉತ್ತಮ ಲಹರಿಯಲ್ಲಿದ್ದ ಕೆಕೆಆರ್ ಬ್ಯಾಟಿಂಗ್ ನಿರ್ಣಾಯಕ ಪಂದ್ಯದಲ್ಲಿ ಕೈಕೊಟ್ಟಿದ್ದ ಸೋಲಿಗೆ ಕಾರಣವಾಯಿತು. ಮೊದಲು ಬ್ಯಾಟಿಂಗ್ ಮಾಡಿ ಕೇವಲ 107 ರನ್ ಗಳಿಗೆ ಆಲೌಟ್ ಆಯಿತು. ಮುಂಬೈ ಪರ ಘಾತಕ ಬೌಲಿಂಗ್ ನಡೆಸಿದ ಕರಣ್ ಶರ್ಮಾ 16 ರನ್ ಗಳಿಗೆ 4 ವಿಕೆಟ್ ಕಿತ್ತರು. ಜಸ್ಪ್ರೀತ್ ಬುಮ್ರಾ 3 ವಿಕೆಟ್ ಕಿತ್ತ ಸಾಥ್ ನೀಡಿದರು.
ನಂತರ ಬ್ಯಾಟಿಂಗ್ ಮಾಡಿದ ಮುಂಬೈ 33 ಬಾಲ್ ಬಾಕಿಯಿರುವಂತೆ ನಾಲ್ಕು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಕೃನಾಲ್ ಪಾಂಡ್ಯ ಮತ್ತು ರೋಹಿತ್ ಶರ್ಮಾ 50 ರನ್ ಗಳ ಜತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ