Publish Date: Fri, 19 May 2017 (08:04 IST)
Updated Date: Fri, 19 May 2017 (08:07 IST)
ಪುಣೆ: ಮೊನ್ನೆ ನಡೆದ ಐಪಿಎಲ್ ಕ್ವಾಲಿಫೈಯರ್ ಪಂದ್ಯ ಗೆದ್ದ ಪುಣೆ ಸೂಪರ್ ಜೈಂಟ್, ಫೈನಲ್ ಗೇರಿದೆ. ಪುಣೆ ಮೊದಲ ಬಾರಿಗೆ ಫೈನಲ್ ಗೇರಿದ ಸಾಧನೆ ಮಾಡಿದರೆ ಆ ತಂಡದ ಆಟಗಾರ ಧೋನಿ ಹೊಸದೊಂದು ದಾಖಲೆ ಮಾಡಿದ್ದಾರೆ.
ಏಳು ಬಾರಿ ಐಪಿಎಲ್ ಫೈನಲ್ ನಲ್ಲಿ ಆಡಿದ ವಿಶಿಷ್ಟ ದಾಖಲೆ ಧೋನಿ ಪಾಲಾಗಲಿದೆ. ಇಂತಹದ್ದೊಂದು ದಾಖಲೆಯನ್ನು ಇದುವರೆಗೆ ಯಾವುದೇ ಕ್ರಿಕೆಟಿಗನೂ ಮಾಡಿರಲಿಲ್ಲ. ಧೋನಿಯೇ ಮೊದಲ ಆಟಗಾರ.
ಪುಣೆ ತಂಡದೊಂದಿಗೆ ಮೊದಲ ಬಾರಿಗೆ ಫೈನಲ್ ಆಡಲಿರುವ ಧೋನಿ ಇದಕ್ಕಿಂತ ಮೊದಲು ಆರು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಗೆ ಐಪಿಎಲ್ ಫೈನಲ್ ಪಂದ್ಯವಾಡಿದ್ದರು. ವಿಶೇಷವೆಂದರೆ ಈ ಬಾರಿ ಸಾಮಾನ್ಯ ಆಟಗಾರನಾಗಿ ಧೋನಿ ಫೈನಲ್ ಆಡಲಿದ್ದಾರೆ. ಆದರೂ ಈ ಫೈನಲ್ ಗೆ ಪುಣೆ ತಂಡವನ್ನು ಮುಟ್ಟಿಸಲು ಧೋನಿ ಭರ್ಜರಿ ಬ್ಯಾಟಿಂಗ್ ಕಾರಣವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ