Publish Date: Fri, 19 May 2017 (07:53 IST)
Updated Date: Fri, 19 May 2017 (07:54 IST)
ಕರಾಚಿ: ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಚಾಂಪಿಯನ್ ಆಗುವವರು ಯಾರು? ಪಾಕಿಸ್ತಾನದ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಮಾಮ್ ಉಲ್ ಹಕ್ ಪ್ರಕಾರ ಪಾಕಿಸ್ತಾನ!
ಟೀಂ ಇಂಡಿಯಾವನ್ನು ಸೋಲಿಸುವುದು ಮಾತ್ರವಲ್ಲದೆ, ಚಾಂಪಿಯನ್ಸ್ ಟ್ರೋಫಿಯನ್ನೂ ಪಾಕ್ ಗೆಲ್ಲುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಪಾಕಿಸ್ತಾನಕ್ಕೆ ಇದುವರೆಗೆ ಯಾವುದೇ ಐಸಿಸಿ ಟೂರ್ನಿಯಲ್ಲಿ ಒಂದು ಬಾರಿ ಮಾತ್ರ ಭಾರತವನ್ನು ಸೋಲಿಸಿತ್ತು. ಅದೂ ಇಂಜಮಾಮ್ ನೇತೃತ್ವದಲ್ಲಿ. ಆದರೆ ಈ ಬಾರಿ ಪಾಕ್ ವಿರಾಟ್ ಕೊಹ್ಲಿ ನೇತೃತ್ವದ ಭಾರತವನ್ನು ಸೋಲಿಸುತ್ತದೆ ಎಂಬ ವಿಶ್ವಾಸ ಅವರದ್ದು. ಜೂನ್ 4 ರಂದು ಭಾರತ-ಪಾಕ್ ಎದುರಾಗಲಿವೆ.
ನಾವು ಇಂಗ್ಲೆಂಡ್ ಗೆ ಭಾರತವನ್ನು ಸೋಲಿಸಲು ಮಾತ್ರ ತೆರಳುತ್ತಿಲ್ಲ. ಮತ್ತೆ ನಾವು ಆ ತಂಡವನ್ನು ಸೋಲಿಸುತ್ತೇವೆ. ಆದರೆ ಅದರ ಜತೆಗೆ ಕಪ್ ಗೆಲ್ಲುವುದು ನಮ್ಮ ಗುರಿ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ