Publish Date: Tue, 18 Apr 2017 (05:08 IST)
Updated Date: Tue, 18 Apr 2017 (05:11 IST)
ನವದೆಹಲಿ: ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಿನ್ನೆ ಎಂಎಸ್ ಧೋನಿ ಸದಸ್ಯರಾಗಿರುವ ಪುಣೆ ಸೂಪರ್ ಜೈಂಟ್ ತಂಡ ಸೋಲಿಸಿತ್ತು. ಅದರ ನಂತರ ಧೋನಿ ಈ ಗೆಲುವನ್ನು ಹೇಗೆ ಎಂಜಾಯ್ ಮಾಡಿದರು ಗೊತ್ತಾ?
ಧೋನಿ ಈಗ ಫ್ರೀ ಮ್ಯಾನ್. ಅವರಿಗೆ ನಾಯಕತ್ವದ ಚಿಂತೆಯಿಲ್ಲ. ಹೀಗಿರುವಾಗ ಜಯ ಸಿಕ್ಕಿದರೆ ಚೆನ್ನಾಗಿ ಸೆಲೆಬ್ರೇಟ್ ಮಾಡುತ್ತಾರೆ. ಕೊಹ್ಲಿ ಬಳಗದ ವಿರುದ್ಧ ಗೆದ್ದ ಮೇಲೂ ಅಷ್ಟೇ.
ತಂಡದ ಸಹ ಆಟಗಾರರ ಜತೆ ಹೋಟೆಲ್ ನಲ್ಲಿ ಸಖತ್ ಆದ ಕೇಕ್ ಸವಿದರು. ಅಲ್ಲದೆ ಧೋನಿ ಅಭಿಮಾನಿಗಳು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು. ಈ ವಿಡಿಯೋದಲ್ಲಿ ಧೋನಿ, ‘ತಿನ್ರಪ್ಪಾ… ಕೇಕ್ ಭಾರೀ ಚೆನ್ನಾಗಿದೆ’ ಎಂದು ಹಿಂದಿಯಲ್ಲಿ ಹೇಳುವುದು ಈಗ ಭಾರೀ ಹಿಟ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ