Select Your Language

Notifications

webdunia
webdunia
webdunia
webdunia

ಪುಣೆ ತಂಡಕ್ಕೆ ಧೋನಿ ನಿಷ್ಠರಾಗಿಲ್ಲವೇ? ಇಲ್ಲಿದೆ ಉತ್ತರ

ಪುಣೆ ತಂಡಕ್ಕೆ ಧೋನಿ ನಿಷ್ಠರಾಗಿಲ್ಲವೇ? ಇಲ್ಲಿದೆ ಉತ್ತರ
Pune , ಮಂಗಳವಾರ, 18 ಏಪ್ರಿಲ್ 2017 (05:19 IST)
ಪುಣೆ: ನಾಯಕತ್ವ ಕಳೆದುಕೊಂಡ ಮೇಲೆ ಧೋನಿ ಮತ್ತು ಪುಣೆ ಸೂಪರ್ ಜೈಂಟ್ ತಂಡದ ಮಾಲಿಕರ ನಡುವಿ ಮುಸುಕಿನ ಗುದ್ದಾಟ ಈಗ ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ಬ್ಯಾಟಿಂಗ್ ಮೂಲಕ ಹೇಲಿಕೊಳ್ಳುವಂತಹ ಪ್ರದರ್ಶನ ನೀಡದ ಧೋನಿ ಬಗ್ಗೆ ಬರುತ್ತಿರುವ ಟೀಕೆಗಳಿಗೆ ಸಹ ಆಟಗಾರ ಬೆನ್ ಸ್ಟೋಕ್ ಉತ್ತರವೇನು ಗೊತ್ತಾ?

 
ಧೋನಿ ತಂಡದಲ್ಲಿದ್ದರೆ, ಯಾವ ಮೈದಾನದಲ್ಲಿ ಆಡುತ್ತಿದ್ದರೂ, ಅದು ತವರಿನ ಅಂಗಣವೆನ್ನುವಷ್ಟು ಆರಾಮವಾಗಿರುತ್ತದೆ. ಆತ ವಿಕೆಟ್ ಹಿಂದುಗಡೆಯಿದ್ದರೆ, ಬ್ಯಾಟ್ಸ್ ಮನ್ ಮಿಲಿ ಮೀಟರ್ ನಷ್ಟು ಕ್ರೀಸ್ ನಿಂದ ಕದಲಿದರೂ ಮುಗಿದೇ ಹೋಯಿತು ಎಂದು ಬೆನ್ ಧೋನಿ ಗುಣಗಾನ ಮಾಡಿದ್ದಾರೆ.

ಆರ್ ಸಿಬಿ ವಿರುದ್ಧದ ಪಂದ್ಯದಲ್ಲ ಸ್ಟೋಕ್ಸ್ ಅದ್ಭುತ ಬೌಲಿಂಗ್ ಪ್ರದರ್ಶಿಸಿ ವಿರಾಟ್ ಕೊಹ್ಲಿ ವಿಕೆಟ್ ಉಡಾಯಿಸಿದ್ದರು. ಈ ಪಂದ್ಯದಲ್ಲಿ ಪಂದ್ಯ ಪುರುಷ ಪ್ರಶಸ್ತಿ ಗೆದ್ದ ನಂತರ ಅವರು ಈ ರೀತಿಯಾಗಿ ಧೋನಿ ಗುಣಗಾನ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಯನ್ನು ಸೋಲಿಸಿದ ಮೇಲೆ ಧೋನಿ ಸೆಲೆಬ್ರೇಷನ್ ಹೀಗಿತ್ತು!